
ಬ್ರಿಮ್ಸ್‌ನಲ್ಲಿರದ ಔಷಧಿಗಳನ್ನ, ಬೇರೆಡೆ ತರಿಸಿ ಚಿಕಿತ್ಸೆ ನೀಡುವಂತೆ ಖಂಡ್ರೆ ಸೂಚನೆ.
ಬೀದರ್ : ಗಡಿ ಜಿಲ್ಲೆ ಬೀದರ್‌ನ ಜಿಲ್ಲಾಸ್ಪತ್ರೆ ಬ್ರಿಮ್ಸ್‌ನಲ್ಲಿ ದೊರೆಯದ ಔಷಧಿಗಳನ್ನ ಬೇರೆಡೆಯಿಂದ ತರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸಚಿವ ಈಶ್ವರ ಖಂಡ್ರೆ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್‌ಗೆ ಸೂಚನೆ ನೀಡಿದರು.
ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಔರಾದ್ ತಾಲೂಕಿನ ಜೀರಗಾ ಗ್ರಾಮದ ವೀರಶೆಟ್ಟಿ ಎಂಬುವವರು ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯಲು ಒಂದು ಇಂಜೆಕ್ಷನ್‌ಗೆ 13 ಸಾವಿರ ಮೌಲ್ಯದ 5 ಇಂಜೆಕ್ಷನ್‌ಗಳ ಅವಶ್ಯಕತೆ ಇದೆ. ಅದ್ರೆ ಜಿಬಿ ಸಿಂಡ್ರೊಮ್ ಖಾಯಿಲೆಗೆ ಇಂಜೆಕ್ಷನ್‌ಗಳು ಬ್ರಿಮ್ಸ್ ಆಸ್ಪತ್ರೆಯಲ್ಲಿ ದೊರೆಯದ ಕಾರಣ ಬೇರೆಡೆ ತರುವಂತೆ ಬ್ರಿಮ್ಸ್ ವೈದ್ಯಾಧಿಕಾರಿಗಳು ರೋಗಿ ಕುಟುಂಬಸ್ಥರಿಗೆ ಹೇಳಿದ್ದರು. ಕುಟುಂಬಸ್ಥರು ಸಚಿವ ಖಂಡ್ರೆ ಎದುರಿಗೆ ಸಮಸ್ಯೆ ಪ್ರಸ್ತಾಪಿಸಿದಾಗ ಸ್ಥಳದಲ್ಲೆ ಇದ್ದ ನಿರ್ದೇಶಕ ಶಿವಕುಮಾರ್ ಶೆಟಕಾರ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ಖಂಡ್ರೆ ಬೇರೆಡೆ ಔಷಧಿ ತರಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದರು. ಬಳಿಕ ನಿರ್ದೇಶಕ ಶಿವಕುಮಾರ್ ಶೆಟ್ಕಾರ್ ಕಲಬುರಗಿಯಿಂದ ಇಂಜೆಕ್ಷನ್ ತರಿಸಿ ಚಿಕಿತ್ಸೆ ನೀಡುವ ಭರವಸೆ ನೀಡಿದರು.
THG BIDAR




