ಬಟ್ಟೆಯಿಂದ ಭವ್ಯಭಾರತದ ಪ್ರಜೆಗಳನ್ನು ವಿಭಜಿಸುವ ನಾಚಿಕೆಗೇಡು ಸಣ್ಣತನ ಬಿಟ್ಟು ರೈಲಿನೊಳಗಿರುವವರು ಯಾವ ಬಟ್ಟೆಯವರು ಎಂದು ಯೋಚಿಸದೆ ಜೀವ ಉಳಿಸಿದ ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತೀರೇ? – ನಟ ಕಿಶೋರ್

ನಟ ಕಿಶೋರ್ ದಿಟ್ಟವಾಗಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ‌. ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತಾರೆ‌. ಮುಸ್ಲಿಮ್ ಬಾಲಕನೊಬ್ಬ ರೈಲು ದುರಂತವನ್ನು ತಡೆದ ಶೌರ್ಯವನ್ನು ವ್ಯವಸ್ಥೆಯ ತಾರತಮ್ಯ ನೀತಿಗೆ ಕಪಾಳಮೋಕ್ಷದಂತೆ ಅವರ ಅಭಿಪ್ರಾಯ ಮಂಡಿಸಿದ್ದಾರೆ.

ನಟ ಕಿಶೋರ್ ತಮ್ಮ ಫೇಸ್ಬುಕ್ ಈ ರೀತಿ ಬರೆದುಕೊಂಡಿದ್ದಾರೆ.

FB IMG 1695811098335 Featured Story, State News

“ಭಲೇ ಬಾಲಕ, ನಮಗೆಲ್ಲ ಮಾದರಿಯಾದೆ ನೀನು..
ಒಮ್ಮೆ ಯೋಚಿಸಿ.

ಇವರೇನಾದರೂ ಬಟ್ಟೆಯಿಂದ ಈ ಬಾಲಕನನ್ನು ಗುರುತಿಸಿಬಿಟ್ಟಿದ್ದರೆ? ಆ ರೈಲಿನ ಚಾಲಕ ದಿನಕ್ಕೊಂದು ವಂದೇಭಾರತ ರೈಲು ಬಿಡುವ ಪ್ರಧಾನ ಸೇವಕನಾಗಿದ್ದಿದ್ದರೆ?? ರೈಲನ್ನು ಸೀದಾ ಪಾಕಿಸ್ಥಾನಕ್ಕೇ ನುಗ್ಗಿಸಿಬಿಡುತ್ತಿದ್ದನೇನೊ?? ತನ್ನ ಸ್ಥಾನದ ಗೌರವ ಘನತೆಯ ಅರಿವಿಲ್ಲದೆ, ಬಟ್ಟೆಯಿಂದ ಭವ್ಯಭಾರತದ ಪ್ರಜೆಗಳನ್ನು ವಿಭಜಿಸುವ ನಾಚಿಕೆಗೇಡು ಸಣ್ಣತನ ಬಿಟ್ಟು ರೈಲಿನೊಳಗಿರುವವರು ಯಾವ ಬಟ್ಟೆಯವರು ಎಂದು ಯೋಚಿಸದೆ ಜೀವ ಉಳಿಸಿದ ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತೀರೇ?

ಈ ಬಾಲಕನಿಗೆ ಶಾಲೆಯ ಮಕ್ಕಳೆಲ್ಲರ ಕೈಲಿ ಕಪಾಳಕ್ಕೆ ಹೊಡೆಸುವ, ದನ ತಿಂದರೆಂದು ಇವನ ಕೋಮಿನ ಮನುಷ್ಯರನ್ನೇ ಸಜೀವದಹನ ಮಾಡುವ ಧರ್ಮಾಂಧರಾಗುವುದ ಬಿಟ್ಟು ಮನುಷ್ಯರಾದೀರೇ? ಹಳಿತಪ್ಪಿ ಹೊರಟ ನಮ್ಮ ಜೀವನವನ್ನು ಸರಿದಾರಿಗೆ ತಂದೀರೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ‌

Latest Indian news

Popular Stories