KTR 5000 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 119 ಸದಸ್ಯ ಬಲದ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಅಗತ್ಯವಾಗಿದ್ದು, ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿದೆ. ಆಡಳಿತರೂಢ ಬಿಆರ್ಎಸ್ ಭಾರೀ ಹಿನ್ನಡೆ ಅನುಭವಿಸುತ್ತಿದ್ದು, ಹೀನಾಯ ಸೋಲಿನತ್ತ ಮುಖ ಮಾಡಿದೆ.

ಅದರೆ ತೆಲಂಗಾಣದ ಐಟಿ ಬಿಟಿ ಸಚಿವ ಕೆ ಟಿ ಅರ್ ಅವರು ಸಿರಿಸಿಲ್ಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಬೆಳ್ಳಿಗೆ 10 : 45 ಸಮಯದ ಹೊತ್ತಿಗೆ 5ನೇಯ ಸುತ್ತಿನ ಮತ ಎಣಿಕೆ ಮುಗಿದಿದ್ದು 5000ಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ

ಸಿರಿಸಿಲ್ಲ ಮತಕ್ಷೇತ್ರದ ಮೇಲೆ ಕೆ ಟಿ ಅರ್ ಮೊದಲಿನಿಂದಲೂ ಉತ್ತಮ ಹಿಡಿತವನ್ನು ಸಾಧಿಸಿದ್ದು ,ಈ ಬಾರಿಯು ಸಹ ಗೆಲ್ಲುವಂತ ಲಕ್ಷಣಗಳು ಕಾಣಿಸುತ್ತಿವೆ

ಹಣಮಂತ ದೇಶಮುಖ
THG ಹೈದ್ರಾಬಾದ್

Latest Indian news

Popular Stories