ಕುಮಾರಸ್ವಾಮಿ ತೊಟ್ಟಿದ್ದ ಆರ್‌ಎಸ್‌ಎಸ್‌ ಚೆಡ್ಡಿ ಗೊತ್ತೇ ಆಗಲಿಲ್ಲ: ಸಚಿವ ಜಮೀರ್‌ ಲೇವಡಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಕಲ ವಿದ್ಯೆಗಳೂ ನನಗೆ ಗೊತ್ತಿತ್ತು. ಆದರೆ, ಅವರು ಪ್ಯಾಂಟ್‌ ಒಳಗೆ ಆರ್‌ಎಸ್‌ಎಸ್‌ ಚೆಡ್ಡಿ ಹಾಕಿದ್ದು ಗೊತ್ತೇ ಆಗಲಿಲ್ಲ’ ಎಂದು ವಸತಿ ಮತ್ತು ಅಲ್ಯಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಸೋಮವಾರ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಾನಾ ಜೆಡಿಎಸ್‌ ಮುಖಂಡರ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ನಿಂದ ಹೊರಬರುತ್ತಿರುವ ಪ್ರಮುಖರನ್ನು ನಗರದ ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ಬಿಜೆಪಿ ಜೊತೆಗೆ ಜೆಡಿಎಸ್‌ ಮೈತ್ರಿಯಿಂದ ಜಾತ್ಯತೀತ ಮನೋಭಾವದ ನೂರಾರು ನಾಯಕರು ಬೇಸರಗೊಂಡಿದ್ದು, ಕಾಂಗ್ರೆಸ್‌ ಸೇರ್ಪಡೆಗಾಗಿ ನನ್ನ ಸಂಪರ್ಕದಲ್ಲಿದ್ದಾರೆ. ದೇವೇಗೌಡರು ಈಗಲೂ ಸೆಕ್ಯುಲರ್‌. ಅವರಿಂದ ನಮ್ಮ ಮುಸ್ಲಿಂ ಸಮಾಜಕ್ಕೆ ನ್ಯಾಯ ಸಿಕ್ಕಿದೆ ಮತ್ತು 2ನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ, ಕುಮಾರಸ್ವಾಮಿ ಖಂಡಿತವಾಗಿ ಸೆಕ್ಯುಲರ್‌ ಅಲ್ಲ. ಮುಸ್ಲಿಂ ಸಮುದಾಯದವರು ಅನಿವಾರ್ಯವಾಗಿ ನನಗೆ ಮತಹಾಕಿದರು ಎಂದು ಅವರು ಹೇಳಿಕೊಂಡಿರುವುದು ನೋವು ತಂದಿದೆ.

ಕುಮಾರಸ್ವಾಮಿ ಗೆದ್ದಿರುವುದು 12 ಸಾವಿರ ಮತಗಳ ಅಂತರದಿಂದ ಮಾತ್ರ. ಡಿ.ಕೆ. ಶಿವಕುಮಾರ್‌ ಅವರಂತೆ 1.20 ಲಕ್ಷ ಮತಗಳಿಂದ ಗೆದ್ದಿಲ್ಲ. ಮುಸ್ಲಿಂ ಸಮುದಾಯ ಮತ ಕೊಡದಿದ್ದರೆ ಏನಾಗುತ್ತಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಲಿ’ ಎಂದು ತಿಳಿಸಿದರು.

ಸಿ. ಎಂ.ಇಬ್ರಾಹಿಂ ಅವರನ್ನು ಜೆ ಡಿ ಎಸ್ ಗೆ ಕರೆದೋಯ್ದು ನಾಮ್ಕಾ ವಾಸ್ತೆ ಅಧ್ಯಕ್ಷ ಮಾಡಿ ಮೈತ್ರಿ ಮಾತುಕತೆ ಮಾಹಿತಿ ಕೊಡದೆ ಜತೆಗೂ ಕರೆದುಕೊಂಡು ಹೋಗದೆ ಅವಮಾನ ಮಾಡಿದ್ದಾರೆ. ಪರಿಷತ್ ಸದಸ್ಯ ಸ್ಥಾನ ಸಹ ಅವರಿಗೆ ಕೊಡಲಿಲ್ಲ. ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಮುಸ್ಲಿಂ ಸಮುದಾಯ ಕಂಡರೆ ದ್ವೇಷ ಎಂದರು.

ಇಜೇ ವೇಳೆ ಜೆಡಿಎಸ್ -ಬಿಜೆಪಿ ಸರ್ಕಾರದಲ್ಲಿ ಜಮೀರ್ ಅಹಮದ್ ಸಚಿವರಾಗಿರಲಿಲ್ಲವೇ ಎಂದ ಬಿ. ಎಂ. ಫಾರೂಕ್ ಅವರಿಗೆ ತಿರುಗೇಟು ನೀಡಿದ ಅವಕು. ಆಗ ಮೈತ್ರಿ ಆಗಿರಲಿಲ್ಲ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಸರ್ಕಾರ ರಚನೆ ಮಾಡಿದ್ದೆವು. ಮೈತ್ರಿ ಆಗಿದ್ದರೆ ನಾನು ಆಗಲೇ ಪಕ್ಷ ಬಿಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಜೆಡಿಎಸ್-ಬಿಜೆಪಿ ಸರ್ಕಾರ ದಲ್ಲಿ ಕುಮಾರಸ್ವಾಮಿ ನನಗೆ ಕಾಟಾಚಾರಕ್ಕೆ ಸಚಿವ ಸ್ಥಾನ ನೀಡಿ, ವಖ್ಫ್, ಹಜ್ ಖಾತೆ ಮಾತ್ರ ನೀಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಕಳೆದ ಬಾರಿ ನಾಲ್ಕು, ಈ ಬಾರಿ ಮೂರು ಪ್ರಬಲ ಖಾತೆ ನೀಡಿದ್ದಾರೆ. ಇದು ಕುಮಾರಸ್ವಾಮಿಗೂ ಕಾಂಗ್ರೆಸ್ ಗೆ ಇರುವ ವ್ಯತಾಸ ಎಂದು ಹೇಳಿದರು.

ಬಿ. ಎಂ. ಫಾರೂಕ್ ಅವರ ಬಗ್ಗೆ ಇದೀಗ ಪ್ರೀತಿ ತೋರುವ ಕುಮಾರಸ್ವಾಮಿ ಅವರು 2018 ರಲ್ಲಿ ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದಾಗ ಜೆಡಿಎಸ್ ನಿಂದ ಯಾಕೆ ಸಚಿವ ಸ್ಥಾನ ನೀಡಲಿಲ್ಲ ಎಂದು ಪ್ರೆಶ್ನೆ ಮಾಡಿದರು.

ಚುನಾವಣೆಗೆ ಮುಂಚೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ, ಗೃಹ ಮಂತ್ರಿ ಮಾಡ್ತೇನೆ ಅಂದಿದ್ದರು. ಸಂಪುಟದಲ್ಲಿ ಮೂರು ಸ್ಥಾನ ಖಾಲಿ ಇದ್ದರೂ ಫಾರೂಕ್ ಅವರನ್ನು ಸಚಿವರಾನ್ನಾಗಿ ಮಾಡಲಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದಾಗ ರಾಮಸ್ವಾಮಿ, ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿ ಮಾಡಿದರು. ಸೋಲುವ ಸಮಯದಲ್ಲಿ ಫಾರೂಕ್ ಅವರಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಯಿತು.

ಹಿಜಾಬ್, ಆಜಾನ್, ಹಲಾಲ್ ವಿಚಾರ ತೆಗೆದು ಬಿಜೆಪಿ ಮುಸ್ಲಿಂ ಸಮುದಾಯದ ಬಗ್ಗೆ ಹೇಗೆ ನಡೆದು ಕೊಂಡಿತು ಗೊತ್ತಿದೆ. ಇದನ್ನು ಫಾರೂಕ್ ಹೇಗೆ ಸಮರ್ಥಿಸಿಕೊಂಡು ಬಿಜೆಪಿ ಮೈತ್ರಿ ಒಪ್ಪುತ್ತಾರೆ. ಸಮುದಾಯ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದರು.

Latest Indian news

Popular Stories