Featured StoryNational

ಬಿಟ್ಟಿ ಭಾಗ್ಯಗಳೆಂದು ಹೀಯಾಳಿಸಿದ ಬಿಜೆಪಿಯಿಂದ ಮಧ್ಯೆ ಪ್ರದೇಶದಲ್ಲಿ ಗೃಹ ಲಕ್ಷ್ಮಿ ಯೋಜನೆ ಹೋಲುವ ‘ಲಾಡ್ಲಿ ಬೆಹೆನಾ’ ಯೋಜನೆ ಜಾರಿ!

ಬೆಂಗಳೂರು: ಕಾಂಗ್ರೆಸ್ ಸರಕಾರ ಜಾರಿ ಮಾಡಿರುವ ಗೃಹ ಲಕ್ಷ್ಮಿ ಯೋಜನೆಯನ್ನು ಬಿಟ್ಟಿ ಭಾಗ್ಯವೆಂದು ಹೀಯಾಳಿಸಿದ್ದ ಬಿಜೆಪಿ ಇದೀಗ ಕಾಂಗ್ರೆಸ್ ಪಕ್ಷದ ಅನುಕರಣೆ ಮಾಡುತ್ತಿದ್ದು ಮಧ್ಯಪ್ರದೇಶದಲ್ಲಿ ಗೃಹ ಲಕ್ಷ್ಮಿ ಯೋಜನೆ ಹೋಲುವ ಲಾಡ್ಲಿ ಬೆಹೆನಾ ಯೋಜನೆ ಜಾರಿ ಮಾಡಿದ್ದು 1.25 ಮಹಿಳೆಯರಿಗೆ 1000 ರೂಪಾಯಿ ಖಾತೆಗೆ ಹಾಕಿದೆ. ಇದಕ್ಕಾಗಿ 8 ಸಾವಿರ ಕೋಟಿ ಬಿಜೆಪಿ ವ್ಯಯಿಸಲಿದೆ.

ಕಾಂಗ್ರೆಸ್ ಸರಕಾರ ಜಾರಿ ಮಾಡಿರುವ ಯೋಜನೆಯಲ್ಲಿ 2000 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದನ್ನು ದಿಟ್ಟೊ ನಕಲು ಮಾಡಿ 1000 ರೂಪಾಯಿ ಖಾತೆಗೆ ಹಾಕಿದೆ. ಈ ಮೂಲಕ ಬಿಜೆಪಿ ಬಿಟ್ಟಿ ಭಾಗ್ಯವೆಂದು ಹಂಗಿಸುತ್ತಾ ಕಾಂಗ್ರೆಸ್ ನಡೆಗೆ ತಲೆದೂಗಿದೆ.

ಕಾಂಗ್ರೆಸ್ ಗ್ಯಾರಂಟಿ ದೇಶದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು ಬಿಜೆಪಿ ಉತ್ತರ ಇಲ್ಲದೆ ತತ್ತರಿಸುತ್ತಿರುವ ಸಂದರ್ಭದಲ್ಲಿ ಮಧ್ಯೆ ಪ್ರದೇಶದ ಯೋಜನೆ ಜಾರಿ ಕರ್ನಾಟಕದ ಬಿಜೆಪಿಗರಿಗೆ ತಲೆ ನೋವಾಗಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button