
Featured StoryUdupi
ತೆಕ್ಕಟ್ಟೆ: ಸಾಕು ನಾಯಿ ಮೇಲೆ ಚಿರತೆ ದಾಳಿ
ಕುಂದಾಪುರ: ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಮನೆಯೊಂದರ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮಾಲಾಡಿಯ ಸತೀಶ್ ದೇವಾಡಿಗ ಎಂಬವರ ನಿವಾಸದ ಬಳಿ ಬಂದ ಚಿರತೆಯು ಸಾಕುನಾಯಿ ಹೊತ್ತೊಯ್ಯಲು ಯತ್ನಿಸಿದೆ. ಮನೆಯ ಮಹಿಳೆ ಸಮೀಪದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದು ನಾಯಿ ಬೊಗಳುವ ಶಬ್ದ ಕೇಳಿ ಹೊರಬಂದಾಗ ನಾಯಿ ಬಿಟ್ಟು ಚಿರತೆ ಹಾಡಿಯತ್ತ ಓಡಿ ಮರೆಯಾಗಿದೆ.
ಚಿರತೆ ದಾಳಿಯಿಂದ ನಾಯಿ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ




