ಕಾರವಾರ ಅಬಕಾರಿ ಜಿಲ್ಲಾಧಿಕಾರಿ ಎಂ.ರೂಪಾ ಅವರ ಮನೆ ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ಕಾರವಾರ: ಕಾರವಾರ ಅಬಕಾರಿ ಜಿಲ್ಲಾಧಿಕಾರಿ ಎಂ.ರೂಪಾ ಅವರ ಮನೆ ಕಚೇರಿ ಮೇಲೆ ಬುಧುವಾರ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಎಂ.ರೂಪಾ ಬೆಂಗಳೂರನಲ್ಲಿ ಎರಡು ಮನೆ, ಉಡುಪಿ ಅಬಕಾರಿ ಕಚೇರಿ ಹಾಗೂ ಮನೆ , ಶಿವಮೊಗ್ಗ ಹೊಸನಗರದಲ್ಲಿನ ಮನೆ ಹಾಗೂ ಕಾರವಾರದಲ್ಲಿನ ಮನೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎನ್ನಲಾಗಿದೆ. ಉಡುಪಿ ಲೋಕಾಯುಕ್ತ ಎಸ್ಪಿ ದಾಳಿಯ ನೇತೃತ್ವವಹಿಸಿದ್ದರು.

ಕಾರವಾರ ಲೋಕಾಯುಕ್ತ ಎಸ್ಪಿ ಸಹ ದಾಳಿಯ ವೇಳೆ ಇದ್ದರು ಎನ್ನಲಾಗಿದೆ. ರೂಪ ಯಾವ ಯಾವ ಜಿಲ್ಲೆಯಲ್ಲಿ ಅಬಕಾರಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೂ ಅಲ್ಲಿ ಮನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಇವರ ಸಂಪತ್ತಿರುವ ಐದು ಕಡೆ ದಾಳಿಯಾಗಿದೆ ಎನ್ನಲಾಗಿದೆ .
..

Latest Indian news

Popular Stories