Featured StoryNational

ಲೋಕ ಸಭಾ ಚುನಾವಣೆ ಎಪ್ರಿಲ್ 16 ಕ್ಕೆ ನಡೆಯುತ್ತಾ?

ಲೋಕಸಭಾ ಚುನಾವಣೆ ಎಪ್ರಿಲ್ 16 ಕ್ಕೆ ನಡೆಯುತ್ತಾ ಎಂಬ ಕುತೂಹಲ ಹುಟ್ಟು ಹಾಕಿದ್ದು‌ ಮಂಗಳವಾರ ವೈರಲಾದ ಚುನಾವಣಾ ಆಯೋಗದ ಸುತ್ತೋಲೆ ಆದರೆ ಇದಕ್ಕೆ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟನೆ ನೀಡಿದೆ.

ಭಾರತದ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆ ಕ್ಲಿಷ್ಟಕರ ಕೂಡ ಹೌದು ಈ ಹಿನ್ನಲೆಯಲ್ಲಿ ಅಧಿಕಾರಿಗಳ ಸಿದ್ಧತೆಗಾಗಿ ವಾಡಿಕೆಯಂತೆ ಒಂದು ಉಲ್ಲೇಖಿತ ದಿನಾಂಕವಾಗಿದ್ಧು ಇದರರ್ಥ ಆ ದಿನ ಲೋಕಸಭಾ ಚುನಾವಣೆ ಎಂದಲ್ಲ ಎಂಬುವುದು “ಚುನಾವಣಾ ಆಯೋಗ” ದ ಸ್ಪಷ್ಟನೆಯಿಂದ ತಿಳಿದು ಬಂದಿದೆ.

ಈತನ್ಮಧ್ಯೆ ಈ ಬಾರಿಯ ಚುನಾವಣೆ ಬಹಳಷ್ಟು ಕುತೂಹಲ ನಿರ್ಮಿಸಿದೆ. ರಾಮ ಮಂದಿರ ಉದ್ಘಾಟನೆಯೊಂದಿಗೆ ಬಿಜೆಪಿ ಮೂರನೇ ಗೆಲುವಿನ ಉತ್ಸಾಹದಲ್ಲಿದ್ದರೆ ಕಾಂಗ್ರೆಸ್, ಟಿ.ಎಮ್.ಸಿ, ಜೆಡಿಯು, ಆರ್.ಜೆಡಿಯು, ಡಿ.ಎಮ್.ಕೆ ಸೇರಿದಂತೆ ಘಟಾನುಘಾಟಿ ಪಕ್ಷಗಳು ಬಿಜೆಪಿಗೆ ಚೆಕ್ ನೀಡಲು ಕಾತರವಾಗಿದೆ. ಈ ಬಾರಿ ಬಿಜೆಪಿ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಚಾರದಲ್ಲಿದೆ. ಆದರೆ‌ಮೈತ್ರಿಕೂಟ ಗೆಲುವಿಗೆ ಠಕ್ಕರ್‌ನೀಡಲು ಸರ್ವ ಸಿದ್ಧವಾಗಿದೆ.

ಈ ರೋಚಕ ಹಣಾಹಣಿ ಬಹುತೇಕ ಮೇ 15 ರ ಒಳಗೆ ನಡೆಯುವುದು ಮಾತ್ರ ಪಕ್ಕಾ!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button