Udupi

ಉಡುಪಿ| ಕಳಪೆ ಮಟ್ಟದ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ಉಡುಪಿಯ ಪರ್ಯಾಯಯೋತ್ಸವ ಕಾರ್ಯಕ್ರಮಕ್ಕಾಗಿ ಪೂರ್ವ ಸಿದ್ಧತೆಗಳು ಆಡಳಿತ ವ್ಯವಸ್ಥೆಗಳಿಂದ ನಡೆಯುತ್ತಿದೆ. ಅಲ್ಲಲ್ಲಿ ಹದಗೆಟ್ಟ ರಸ್ತೆಗಳಿಗೆ ಡಾಂಬರೀಕರಣ, ಗುಂಡಿಗಳಿದ್ದಲ್ಲಿ ತೇಪೆ ಹಾಕುವ ಕಾಮಗಾರಿ, ನೀರು ಹರಿಯುವಿಕೆಗೆ ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ನಡೆಯುತ್ತಿರುವ ಯಾವೊಂದು ಕಾಮಗಾರಿಗಳು ಗುಣಮಟ್ಟದಲ್ಲಿಲ್ಲದೆ ಎಲ್ಲವೂ ಅವೈಜ್ಞಾನಿಕವಾಗಿ ನಡೆಯುತ್ತಿರುವುದನ್ನು ಕಂಡು ಮಾಜಿ ನಗರಸಭೆ ಸದಸ್ಯ ನಿತ್ಯಾನಂದ ಒಳಕಾಡುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ನಗರಾಡಳಿತದ ಅಧಿಕಾರಿಗಳು ನಡೆಯುತ್ತಿರುವ ಮತ್ತು ನಡೆದಿರುವ ಕಾಮಗಾರಿಯನ್ನು ಪರಿಶೀಲಿಸ ಬೇಕೆಂದು ಒಳಕಾಡುವರು ಆಗ್ರಹಪಡಿಸಿದ್ದಾರೆ.
IMG 20240124 WA0020 Udupi

IMG 20240124 WA0023 Udupi

IMG 20240124 WA0022 Udupi

IMG 20240124 WA0019 Udupi

IMG 20240124 WA0017 Udupi

IMG 20240124 WA0021 Udupi

ಅಮ್ಮುಂಜೆ ಪೆಟ್ರೋಲ್ ಬಂಕ್ ಬಳಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಜಲ್ಲಿಗೆ ಹಾಕಿರುವ ಸಿಮೆಂಟು ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು ಕಂಡುಬಂದಿದೆ. ಹೊಸ ಚರಂಡಿ ನಿರ್ಮಾಣ ಮಾಡಿದ ಸ್ಥಳಗಳಲ್ಲಿ ನೀರಿನ ಹರಿಯುವಿಕೆಯು ಇರುವುದಿಲ್ಲದರಿಂದ ಇದೊಂದು ವ್ಯರ್ಥ ಕಾಮಗಾರಿ ಎನಿಸಿದೆ. ಅಜ್ಜರಕಾಡು ಇಲ್ಲಿಂದ ಬ್ರಹ್ಮಗಿರಿ ಅವರೆಗೆ ರಸ್ತೆ ವಿಭಾಜಕಕ್ಕೆ ಬಣ್ಣ ಬಳಿಯುವ ಕಾಮಗಾರಿಯು ನಡೆಯುತ್ತಿದೆ. ವೈಜ್ಞಾನಿಕವಾಗಿ ಎರಡು ಹಂತದಲ್ಲಿ ಬಣ್ಣಗಾರಿಕೆ ನಡೆಸಿದರೆ, ದೀರ್ಘ ಸಮಯ ಬಣ್ಣದ ಬಾಳಿಕೆ ಬರುತ್ತದೆ. ಆದರೆ ಇಲ್ಲಿ ಒಂದೇ ಹಂತದಲ್ಲಿ ಬಣ್ಣ ಬಳಿದು ಕಾಮಗಾರಿಯನ್ನು ಕಳಪೆಗೊಳಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯನ್ನು ಕಂಡು ಉಡುಪಿಯ ನಾಗರಿಕರು ಸಾರ್ವಜನಿಕ ಹಣ ಪೋಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button