ಅಂಬೇಡ್ಕರ್ ರವರನ್ನು ಒಂದು ಸಮುದಾಯ, ಒಂದು ಜಾತಿಯ ನಾಯಕರನ್ನಾಗಿ ಬಿಂಬಿಸಲು ಯತ್ನಿಸಿತ್ತಿರುವುದು ಕಳವಳಕಾರಿ – ಡಾ| ಶಿವ ಮಲ್ಲಯ್ಯ ಸತೀಶ್

ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಒಂದು ಸಮುದಾಯ, ಒಂದು ಜಾತಿಯ ನಾಯಕರನ್ನಾಗಿ ಬಿಂಬಿಸಲು ಯತ್ನಿಸಿತ್ತಿರುವುದು ಕಳವಳಿಕಾರಿಯಾಗಿದೆ‌. ಮಾತ್ರವಲ್ಲ ಘೋರ ಅಪರಾಧವಾಗಿದೆ ಎಂದು ಕೊಡಗು ವೈಜ್ಞಾನಿಕ ವಿಭಾಗ ಸಂಸ್ಥೆ ಹಾಗೂ ಭೋಧಕ ಆಸ್ಪತ್ರೆಯ. ವೈದ್ಯಾಧಿಕಾರಿಗಳಾದ ಡಾ| ಶಿವ ಮಲ್ಲಯ್ಯ ಸತೀಶ್ ರವರು ಪ್ರತಿಪಾದಿಸಿದರು.

ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಂವಿಧಾನದ ಪಿತಾಮಹ ಡಾ| ಅಂಬೇಡ್ಕರ್ ರವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ರವರು ದೇಶದ ಎಲ್ಲಾ ಪ್ರಜೆಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನುಭಾವರಾಗಿದ್ದರು..ಶೋಷಿತರ, ದಮನಿತರ ,ಹಿಂದುಳಿದವರ ಕಲ್ಯಾಣಕ್ಕಾಗಿ ಹೋರಾಡುವ ಮೂಲಕ ಸಮಾನತೆಯನ್ನು ಪ್ರತಿಪಾದಿಸಿದರು. ಸನ್ಮಾನ ಸ್ವೀಕರಿಸಿ ದ. ಮಡಿಕೇರಿ ಕ್ಷೇತ್ರದ ಶಾಸಕರು ಡಾ| ಮಂತರ್ ಗೌಡರು ಮಾತನಾಡಿ ವಿದ್ಯಾರ್ಥಿಗಳು ಅಂಬೇಡ್ಕರ್ ರವರ ತ್ಯಾಗ ,ಪರಿಶ್ರಮ ದ ಜೀವನವನ್ನು ಅಳವಡಿಸಿ ಗುರಿಯನ್ನು ಸಾದಿಸಬೇಕು..ಮುಂದೆ ಡಾಕ್ಟರ್, ಇಂಜಿನಿಯರ್, ಲಾಯರ್ ಹಾಗೂ ಯಾವುದೇ ಇನ್ನಿತರ ಉನ್ನತ ಸ್ಥಾನಕ್ಕೇರಿದರೂ ಸೇವಾ ಮನೋಭಾವವನ್ನು ಹೊಂದಿದಾಗ ಮಾತ್ರ. ಜೀವನಕ್ಕೆ ಅರ್ಥ ಬರುತ್ತದೆ.ಆದ್ದರಿಂದ ರಾಜಕೀಯ ಕ್ಷೇತ್ರಕ್ಕೆ ವಿದ್ಯಾವಂತರು ಬರಬೇಕು ಜನರ ಸಂಕಷ್ಟಕ್ಕೆ ಪರಿಹಾರವಾಗಬೇಕು ಎಂದರು..


ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯಾಧಿಕಾರಿ ಹೆಚ್ ದೇವದಾಸ್ ನೆರವೇರಿಸಿದರು.
ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಮಿತಿ ಸಂಚಾಲಕರಾದ ಹೆಚ್ ಎಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪೌರ ಕಾರ್ಮಿಕರು ಹಾಗೂ ಶಕ್ತಿ ವೃದ್ದಾಶ್ರಮದ ಹಿರಿಯರಿಗೆ ಬಟೆ ಬರಹಗಳನ್ನು ಶಾಸಕರು ವಿತರಿಸಿ..ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು..

Latest Indian news

Popular Stories