ಅಕ್ಕಿಯೋ, ಹಣವೋ ಸರ್ವೆ ಆರಂಭ: ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹ; ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ಆಹಾರ ಇಲಾಖೆ

ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆ ಬಗ್ಗೆ ಸರ್ಕಾರ ಸರ್ವೆ ಆರಂಭಿಸಿದೆ. ಕಾರ್ಡ್​ದಾರರಿಗೆ ಅಕ್ಕಿ ಬೇಕೋ ಅಥವಾ ಹಣ ಬೇಕೋ ಎಂಬುದನ್ನು ಆಹಾರ ಇಲಾಖೆ ಅಧಿಕಾರಿಗಳು ಫಲಾನುಭವಿಗಳ ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಕಾರ್ಡ್

ದಾರರ ಬಳಿ ತೆರಳುವ ಅಧಿಕಾರಿಗಳು, ನಿಮಗೆ ಅಕ್ಕಿ ಕೊಡುಬೇಕಾ ಅಥವಾ ಹಣ ಮುಂದುವರಿಸು ಬೇಕಾ ಎಂಬ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಕಾರ್ಡ್​ದಾರರು ನೀಡುವ ಉತ್ತರವನ್ನು ಪುಸ್ತಕದಲ್ಲಿ ಅಧಿಕಾರಿಗಳು ನಮೂದಿಸಿ ಕೊಳ್ಳುತ್ತಾರೆ. ಸರ್ವೆಯಲ್ಲಿ ಎಲ್ಲ ಮಾಹಿತಿ ಕ್ರೋಡೀಕರಿಸಿದ ಬಳಿಕ ಇಲಾಖೆ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿ ಪರಿಶೀಲಿಸಿದ ಬಳಿಕ ಸರ್ಕಾರ, ಯೋಜನೆಯಡಿ ಅಕ್ಕಿ ನೀಡಬೇಕಾ ಅಥವಾ ಹಣವನ್ನೇ ಮುಂದುವರಿಸಬೇಕಾ? ಎಂಬುದನ್ನು ತೀರ್ವ ನಿಸಲಿದೆ. ಗ್ಯಾರಂಟಿಗಳ ಪೈಕಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ಕೊಡುವ ‘ಅನ್ನಭಾಗ್ಯ’ ಯೋಜನೆಯು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ ಸ್ಥಾನಗಳನ್ನು ತಂದುಕೊಡಲು ಪ್ರಮುಖ ಪಾತ್ರ ವಹಿಸಿತ್ತು. ಆದರೆ ಸಾಕಷ್ಟು ಪ್ರಯತ್ನಪಟ್ಟರೂ ರಾಜ್ಯ ಸರ್ಕಾರಕ್ಕೆ ಅಕ್ಕಿ ಸಿಗಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ನಡುವೆ ಅಕ್ಕಿಗಾಗಿ ಜಟಾಪಟಿ ನಡೆಯಿತು.
ಅಕ್ಕಿ ಸಿಗದ ಪರಿಣಾಮ ಕಾಂಗ್ರೆಸ್ ಸರ್ಕಾರ, ಕಾರ್ಡ್​ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯನ್ನು ಜು.10ರಿಂದ ರಾಜ್ಯದಲ್ಲಿ ಜಾರಿಗೆ ತಂದಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್​ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್ ಹಾಗೂ ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್ ಕಾರ್ಡ್​​ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ. ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ. ಅದೇ ರೀತಿ, ಅಂತ್ಯೋದಯ ಕಾರ್ಡ್​ನಲ್ಲಿರುವ ನಾಲ್ವರು ಸದಸ್ಯರಿರುವ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ. ಹಣ ಹಾಕಲಾಗುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿಗ ಹಣವನ್ನು ಈಗಾಗಲೆ ಕಾರ್ಡ್​​ದಾರರ ಖಾತೆಗೆ ಜಮೆ ಮಾಡಲಾಗಿದೆ. ರಾಜ್ಯದಲ್ಲಿರುವ 1.28 ಕೋಟಿ ಬಿಪಿಎಲ್ ಕಾರ್ಡ್​ಗಳ ಪೈಕಿ 1.19 ಕೋಟಿ ಕಾರ್ಡ್​ಗಳಿಗೆ ನಗದು ಬರಲಿದೆ. ಇದುವರೆಗೆ 1.03 ಕೋಟಿ ಕಾರ್ಡ್​ಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ.
ಅಕ್ಕಿ ಕೊಟ್ಟರೆ 10 ಸಾವಿರ ಕೋಟಿ ರೂ. ಅಗತ್ಯ: ಯೋಜನೆಯಡಿ ಬಿಪಿಎಲ್ ಕಾರ್ಡ್​ದಾರರಿಗೆ ಪಡಿತರ ವಿತರಿಸಲು ಪ್ರತಿ ತಿಂಗಳು 2.16 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ಇದಕ್ಕಾಗಿ ವರ್ಷಕ್ಕೆ 10 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ, ಸರ್ವೆಯಿಂದ ಕಾರ್ಡ್​ದಾರರಿಗೆ ಅಕ್ಕಿ ವಿತರಿಸಿದರೆ ಪ್ರತಿ ತಿಂಗಳು ಎಷ್ಟು ಕೋಟಿ ರೂ. ವೆಚ್ಚವಾಗುತ್ತದೆ ಹಾಗೂ ಹಣ ನೀಡಿದರೆ ಎಷ್ಟಾಗಬಹುದು ಎಂಬುದರ ಬಗ್ಗೆಯೂ ಮಾಹಿತಿ ಸಿಗಲಿದೆ. ನಂತರ, ಅಕ್ಕಿ ಕೊಡಬೇಕಾ ಅಥವಾ ಹಣ ನೀಡಬೇಕಾ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ

Latest Indian news

Popular Stories