ಪತಿ ಪತ್ನಿ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ
ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ರಾಧಿಕಾ (40) ಮೃತ ಮಹಿಳೆ ಇದೇ ರಾಜ್ಯದ ರೋಷನ್ (30) ಪತಿ ಬಂಧಿತ ಆರೋಪಿಯಾಗಿದು ಇವರು ಮಡಿಕೇರಿ ನಗರದ ಖಾಸಗಿ ವಸತಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಕೈಗಾರಿಕಾ ಬಡಾವಣೆಯಲ್ಲಿ ವಾಸಿಸುತ್ತಿದ್ದರು.
ಕುಲಕ್ಷ ಕಾರಣಕ್ಕೆ ಇಬ್ಬರ ನಡುವೆ ಕಲಹ ಏರ್ಪಟ್ಟು ರೋಷನ್ ಪತ್ನಿರಾಧಿಕಾಳ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ ತೀವ್ರ ರಕ್ತಸ್ರಾವ ಗೊಂಡ ಮಹಿಳೆಯನ್ನು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾ ದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.
ಆರೋಪಿ ರೋಷನ್ ನನ್ನು ನಗರ ಠಾಣಾ ಪೊಲೀಸರು ಬಂಧಿಸಿದಾರೆ ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ