
Featured StoryUdupi
ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆ
ಮಲ್ಪೆ: ಮಲ್ಪೆ ಬೀಚ್ನಲ್ಲಿ ನೀರಿಗಿಳಿದು ಆಟವಾಡುವ
ವೇಳೆ ಅಲೆಗೆ ಕೊಚ್ಚಿ ಹೋಗಿ ಸಮುದ್ರ ಪಾಲಾಗುತ್ತಿದ್ದ
ಬಾಲಕಿಯನ್ನು ಮಲ್ಪೆ ಬೀಚ್ನ ಜೀವ ರಕ್ಷಕರು ರಕ್ಷಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮಾನಂಗಿ ಗ್ರಾಮದ ಐಶ್ವರ್ಯಾ
(16) ಅವರನ್ನು ರಕ್ಷಣೆ ಮಾಡಲಾಗಿದ್ದು, ಮುಳುಗು ತಜ್ಞ
ಈಶ್ವರ್ ಮಲ್ಪೆ ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರಿಂದ
ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಉಪ್ಪು ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ ಎನ್ನಲಾಗಿದೆ.




