ಮಂಗಳೂರು: ಮಳೆಗೆ ಮುರಿದು ಬಿದ್ದ ಮರದ ಕೊಂಬೆ: ಕಾರುಗಳು ಜಖಂ

ಮಂಗಳೂರು: ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ಕರಂಗಲಪಾಡಿ ಬಳಿ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಜಖಂಗೊಂಡಿದೆ.

ಕರಂಗಲಪಾಡಿಯಿಂದ ಕೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಬೃಹತ್ ಮರದ ಕೊಂಬೆ ಮುರಿದು ಬಿದ್ದಿದೆ. ಮರದ ಸಮೀಪದಲ್ಲೇ ನಗರದ ಪ್ರಸಿದ್ಧ ಆಮ್ಲೇಟ್ ಅಂಗಡಿಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇದ್ದರು. ಮರದ ಕೊಂಬೆ ರಸ್ತೆಗೆ ಬಿದ್ದ ಕಾರಣ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿದೆ. ವಾಹನ ಪಾರ್ಕ್ ಮಾಡಿ ಆಮ್ಲೇಟ್ ತಿನ್ನಲು ಹೋಗಿದ್ದ ಕಾರಣ ಯಾವುದೆ ಜೀವಹಾನಿ ಸಂಭವಿಸಿಲ್ಲ.

ಮರದ ಕೊಂಬೆಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಘಟನೆಯಲ್ಲಿ ಎರಡು ಕಾರುಗಳು ಜಖಂಗೊಂಡಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.

Latest Indian news

Popular Stories