ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಂದ 46.52 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು, ಸೆ.27: ಸೆಪ್ಟೆಂಬರ್ 23 ಮತ್ತು 24ರಂದು ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 46.52 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಐವರು ಪ್ರಯಾಣಿಕರು 775 ಗ್ರಾಂ ತೂಕದ 24-ಕ್ಯಾರೆಟ್ ಚಿನ್ನವನ್ನಹ ಹೊತ್ತೊಯ್ಯುತ್ತಿದ್ದರು.ಅದು ಅವರ ಒಳ ಉಡುಪು, ಏರ್‌ಪಾಡ್‌ಗಳು ಮತ್ತು ತಮ್ಮ ಟ್ರಾಲಿ ಬ್ಯಾಗ್‌ನ ರಾಡ್‌ಗಳಲ್ಲಿ ಪ್ರತ್ಯೇಕವಾಗಿ ಬಚ್ಚಿಡಲಾಗಿತ್ತು.

ಪ್ರಯಾಣಿಕರು ದುಬೈನಿಂದ ದೇಶಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories