ಮಣಿಪುರ: ಜನಾಂಗೀಯ ಹಿಂಸಾಚಾರ ಮತ್ತೆ ಮುಂದುವರಿದಿದ್ದು ರಾತ್ರಿ ಗುಂಪು ದಾಳಿಗೊಳಗಾಗಿ ಮೂವರು ಸೈನಿಕರು ಗಂಭೀರ ಗಾಯಗೊಂಡಿದ್ದಾರೆ. ಶಸ್ತ್ರಾಸ್ತ್ರ ಮಿಲಿಟೆಂಟ್ ಗಳ ದಾಳಿಗೆ ಎರಡುಕಮಾಂಡೊ ಗಳು ಹುತಾತ್ಮರಾಗಿದ್ದಾರೆ.
ಉದ್ರಿಕ್ತರ ಗುಂಪು ರಿಸರ್ವ್ ಬ್ಯಾಟಲಿಯನ್ ಮೇಲೆ ದಾಳಿ ನಡೆಸಿದೆ. ಸೇನೆಯು ಕನಿಷ್ಠ ಶಕ್ತಿ ಬಳಸಿ ಜನರನ್ನು ನಿಯಂತ್ರಿಸಿರುವ ಕುರಿತು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಬಿಎಸ್’ಎಫ್ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಹಿಂಸಾಚಾರ ಮತ್ತೆ ಭುಗಿಲೆದ್ದ ಕಾರಣ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತುರ್ತು ಸಭೆ ಆಯೋಜಿಸಿದ್ದಾರೆ.