Featured StoryNational

ಜೂನ್‌ 4ಕ್ಕೆ ಕೇರಳಕ್ಕೆ ಮುಂಗಾರು ಆಗಮನ

ನವದೆಹಲಿ: ಈ ಬಾರಿಯ ಮುಂಗಾರು ಆಗಮನ ಸಾಮಾನ್ಯವಾಗಿರಲಿದ್ದು ಜೂನ್‌1ಕ್ಕೂ ಮುಂಚಿತವಾಗಿ ಮುಂಗಾರು ಆಗಮನ ಸಾಧ್ಯತೆ ಇಲ್ಲ. ಕೇರಳಕ್ಕೆ ಜೂನ್‌4ರಂದು ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ಅಲ್ಲದೇ, ಮುಂದಿನವಾರ ಅರಬ್ಬೀ ಸಮದ್ರದಲ್ಲಿ ಯಾವುದೇ ಚಂಡಮಾರುತದ ಸಂಭವನೀಯತೆಯೂ ವರದಿಯಾಗಿಲ್ಲ. ಈ ಹಿನ್ನೆಲೆ ಎಲ್ಲೆಡೆ ಮುಂಗಾರಿನ ಸಮಾನ ಹಂಚಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದಲ್ಲಿ ಕೃಷಿಯ ಮೇಲೆ ಹೆಚ್ಚಿನ ಪರಿಣಾಮವೇನು ಬೀರುವುದಿಲ್ಲವೆಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಬೇಗೆಗೆ ಬ್ರೇಕ್‌ ನೀಡಿ, ಶುಕ್ರವಾರ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಇನ್ನೂ ಕೆಲ ದಿನಗಳು ಮಳೆಯಾಗುವ ಹಿನ್ನೆಲೆ ಮೇ 30ರ ವರೆಗೆ ದೆಹಲಿಗೆ ಬಿಸಿಲ ಬೇಗೆಯಿಂದ ಬ್ರೇಕ್‌ ಸಿಗಲಿದೆ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button