ಮಂಗಳೂರಿನ ಮುಹಮ್ಮದ್ ಆಶಿಕ್ ‘ಮಾಸ್ಟರ್ ಶೆಫ್ ಇಂಡಿಯಾ’ ಆಗಿ ಆಯ್ಕೆ

ಮಂಗಳೂರು: ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್ ಆಯೋಜಿಸಿದ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಮಂಗಳೂರಿನ ಮುಹಮ್ಮದ್ ಆಶಿಕ್ ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
‘ಮಾಸ್ಟರ್ ಶೆಫ್ ಇಂಡಿಯಾ’ ದಕ್ಷಿಣ ಕನ್ನಡ ಜಿಲ್ಲೆಗೆ ದೊರೆತ ಮೊದಲ ಪ್ರಶಸ್ತಿಯಾಗಿದೆ.

ದೇಶದ ಹಲವು ಚೆಫ್‌ಗಳ ಪೈಕಿ ಫೈನಲ್ ತಲುಪಿದ ನಾಲ್ವರಲ್ಲಿ ಮುಹಮ್ಮದ್ ಆಶಿಕ್ ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿ ತನ್ನದಾಗಿಸಿದ್ದಾರೆ.

ಮುಹಮ್ಮದ್ ಆಶಿಕ್‌ ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರ.

ಕಲಿಕೆಗೆ ಆರ್ಥಿಕ ಅಡಚಣೆ ಇದ್ದರೂ ಅಡುಗೆ ತಯಾರಿಯಲ್ಲಿ ಅತೀವ ಆಸಕ್ತಿ ಇದ್ದ ಆಶಿಕ್ ಬಂಧು, ಮಿತ್ರರ ನೆರವಿನೊಂದಿಗೆ ಈ ಹಂತಕ್ಕೆ ತಲುಪಿದ್ದಾರೆ.

Latest Indian news

Popular Stories