ರಾಷ್ಟ್ರೀಯ ಲಾಂಛನ ಕೈಬಿಟ್ಟು ಧನ್ವಂತರಿಯ ಚಿತ್ರ ಲೋಗೋದಲ್ಲಿ ಸೇರ್ಪಡೆ | ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೋಗೋ ಬದಲಾವಣೆ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೋಗೋ ಬದಲಾವಣೆ ಮಾಡಲಾಗಿದ್ದು ಈ ಮುಂಚೆ ಇದ್ದ ರಾಷ್ಟ್ರೀಯ ಲಾಂಛನದ ಲೋಗೋ ಕೈ ಬಿಟ್ಟು ಧನ್ವಂತರಿಯ ಚಿತ್ರ ಲೋಗೊದಲ್ಲಿ ಸೇರ್ಪಡಿಸಲಾಗಿದೆ.

ಆಯುರ್ವೇದದ ಹರಿಕಾರ ಎಂದು ಕರೆಯಲ್ಪಡುವ ವಿಷ್ಣು ಪುರಾಣದ ಧನ್ವಂತರಿ ಚಿತ್ರ ಸೇರ್ಪಡೆಯಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಎನ್.ಎಮ್.ಸಿ, ಈ ಲೋಗೋ ಒಂದು ವರ್ಷದಿಂದ ಬಳಕೆಯಲ್ಲಿದೆ ಕಪ್ಪು ಬಿಳುಪು ಆಗಿದ್ದರಿಂದ ಗೋಚರಿಸುತ್ತಿರಲಿಲ್ಲ. ಇದೀಗ ಕಲರ್ ನಲ್ಲಿ ಕಾಣಿಸುತ್ತಿದೆ ಎಂದು ಹೇಳಿದೆ.

ಈಗಿನ ಲೋಗೋದಲ್ಲಿ ಇಂಡಿಯಾ ಬದಲು ಭಾರತ್ ಪದ ಬಳಸಲಾಗಿದೆ. ಇನ್ನು ಇದರ ಕುರಿತು ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಾಗಿದೆ. ಮಾಹಿತಿಯ ಪ್ರಕಾರ ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದೆಂದು ಐ‌ಎಮ್.ಎ ರಾಷ್ಟ್ರೀಯ ಅಧ್ಯಕ್ಷ ಡಾ.ಶರದ್ ಕುಮಾರ್ ಅಗರ್’ವಾಲ್ ತಿಳಿಸಿದ್ದಾರೆ.

Latest Indian news

Popular Stories