ಕಲಾ ಲೋಕ ಸೃಜಿಸಿದ ವಿಶೇಷ ಚೇತನ ಮಕ್ಕಳು

ವಿಜಯಪುರ : ಅದೊಂದು ಅಪೂರ್ವ ಸಂಗಮ, ವಿಶೇಷ ಚೇತನ ಚಿಣ್ಣರ ಕಲರವದ ಜೊತೆಗೆ ಅವರಲ್ಲಿನ ಕಲಾ ಪ್ರೌಢಿಮೆಯನ್ನು ಸಾಕ್ಷಿಕರಿಸುವ ಅಪರೂಪದ ಕಾರ್ಯಕ್ರಮ. ವಿಶೇಷ ಚೇತನ ಮಕ್ಕಳು ತಮ್ಮ ಪಾಲಕರ ನೆರವಿನೊಂದಿಗೆ ಅನೇಕ ಕಲಾಕೃತಿಗಳನ್ನು ರಚಿಸಿ `ಕಲಾ ಲೋಕ’ ಸೃಜಿಸಿದರು.
ಬಿಎಲ್ಡಿಇ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ವಿಶೇಷಚೇತನ ಪುನರ್ವಸತಿ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಕ್ರೀಯಾಶೀಲ ಕಾರ್ಯಕ್ರಮ ಆಯೋಜಿಸುವುದು ರೂಢಿ. ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಕಲಾ ಪ್ರೌಢಿಮೆಯನ್ನು ಮೆರೆದರು. ಪಾಲಕರು ಸಹ ಅಷ್ಟೇ ಸಂತೋಷದಿAದ ಮಕ್ಕಳಿಗೆ ಸಾಥ್ ನೀಡಿದರು.

ಕೆಲವು ವಿಶೇಷ ಚೇತನ ಮಕ್ಕಳು ಲ್ಯಾಂಡ್ಸ್ಕೇಪ್ನಲ್ಲಿ ಸುಂದರವಾದ ಕಲಾಕೃತಿಗಳನ್ನು ರಚಿಸಿದರು, ಕ್ರೇಯಾನ್ಸ್ ಮೊದಲಾದವುಗಳನ್ನು ಬಳಸಿ ಪಾಲಕರು ಬಣ್ಣ ತುಂಬಲು ನೆರವಾದರು. ಸುಂದರ ಕಲಾಕೃತಿ ರಚನೆಯಾಗುತ್ತಿದ್ದಂತೆ ಚಿಣ್ಣರ, ಪಾಲಕರ ಮೊಗದಲ್ಲಿ ಮಂದಹಾಸ ಗಮನ ಸೆಳೆಯಿತು.

ಇನ್ನೂ ಕೆಲವು ಮಕ್ಕಳು ಬಲೂನ್ ಆಧಾರಿತ ವಿವಿಧ ಕ್ರೀಡೆಗಳಲ್ಲಿ ಉತ್ಸಾಹಭರಿತರಾಗಿ ತೊಡಗಿಸಿಕೊಂಡರು. ನಂತರ ಎಲ್ಲರ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಿಬ್ಬಂದಿಗಳು ಹಾಗೂ ಪಾಲಕರು ಸಂಭ್ರಮಿಸಿದರು.

ನೋಡೆಲ್ ಅಧಿಕಾರಿ ಕೆ. ವಿಶ್ವನಾಥ ಮಾತನಾಡಿ, ವಿಶೇಷಚೇತನರಲ್ಲಿ ವಿಶೇಷ ಶಕ್ತಿ ಇದೆ, ಯಾರೂ ಸಹ ತಾವು ಅಂಗವಿಕಲರು ಎಂಬ ಕೀಳರಿಮೆ ಬೆಳೆಸಿಕೊಳ್ಳಬಾರದು, ಅನೇಕ ವಿಶೇಷ ಚೇತನರು ಜಗತ್ತು ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದಾರೆ, ವಿಶೇಷ ಚೇತನ ಮಕ್ಕಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಕೆಲಸ ನಡೆಯಬೇಕಿದೆ ಎಂದರು.

Latest Indian news

Popular Stories