ಗುಂಪು ಹತ್ಯೆ, ಗುಂಪು ಗಲಭೆ ಸಂತ್ರಸ್ಥರಿಗೆ ಪರಿಹಾರ, ಸರ್ಕಾರದ ಆದೇಶ

ವಿಶೇಷ ರಾಜ್ಯಪತ್ರದಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ ಬಾಣದರಂಗಯ್ಯ ಎನ್. ಆರ್. ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ) ಒಳಾಡಳಿತ ಇಲಾಖೆ (ಕಾನೂನು & ಸುವ್ಯವಸ್ಥೆ) ಈ ಕುರಿತು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಅಧಿಸೂಚನೆ ದಿನಾಂಕ 22/2/2012, ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ದಿನಾಂಕ 17/7/2018ರಂದು ನೀಡಿರುವ ಆದೇಶ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ ದಿನಾಂಕ 28/8/2023 ಉಲ್ಲೇಖಿಸಿ ಆದೇಶಿಸಲಾಗಿದೆ.

ಅಪರಾಧ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 357 A ರಲ್ಲಿನ ಉಪಬಂಧಗಳನ್ವಯ ಅಪರಾಧ ಕೃತ್ಯಗಳಿಂದ ಬಾಧಿತರಾದ ಸಂತ್ರಸ್ತರಿಗೆ ಅಥವಾ ಅವಲಂಬಿತರಿಗೆ ನಷ್ಟ ಅಥವಾ ನಷ್ಟ ಅನುಭವಿಸಿದವರಿಗೆ ಪರಿಹಾರದ ಉದ್ದೇಶಕ್ಕಾಗಿ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011 (Karnataka Victim Compensation Scheme, 2011) ರಚಿಸಲಾಗಿರುತ್ತದೆ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ರಾಜ್ಯ ಸರ್ಕಾರಗಳು ಅಪರಾಧ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 357 A ರನ್ವಯ ಸಂತ್ರಸ್ತ ಪರಿಹಾರ ಯೋಜನೆಯನ್ನು ರೂಪಿಸುವಂತೆ ನಿರ್ದೇಶಿಸಿರುತ್ತದೆ. ಈಗಾಗಲೇ ರಾಜ್ಯ ಸರ್ಕಾರವು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011(Karnataka Victim Compensation Scheme, 2011) ರಚಿಸಲಾಗಿದ್ದರೂ, ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ/ ಅವಲಂಬಿತರಿಗೆ ಪರಿಹಾರ ನೀಡಲು ಪ್ರತ್ಯೇಕ ಆದೇಶ ಹೊರಡಿಸಬೇಕಾದ ಅಗತ್ಯತೆ ಇದೆ ಎಂಬುದಾಗಿ ಅಭಿಪ್ರಾಯಪಡಲಾಗಿರುತ್ತದೆ.

ಆದ್ದರಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011(Karnataka Victim Compensation Scheme, 2011) ಅಡಿಯಲ್ಲಿ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರು/ ಅವಲಂಬಿತರು ಪರಿಹಾರ ಕೋರಬಹುದಾದ ಅವಕಾಶಗಳು ಸ್ಪಷ್ಟವಾಗಿ ಒಳಗೊಳ್ಳದೇ ಇರುವುದರಿಂದ ಹಾಗೂ ಘನ ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ/ ಅವಲಂಬಿತರಿಗೆ ಪರಿಹಾರ ನೀಡಲು ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವುದರಿಂದ, ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸುವುದು ಸೂಕ್ತವೆಂದು ಸರ್ಕಾರವು ನಿರ್ಣಯಿಸಿದೆ.
ಈ ಆದೇಶ ಹೊರಡಿಸಿದೆ ಎಂದು ಹೇಳಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಸಂಭವಿಸುವ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ (Lynching/Mob violence Victims) ಸಂತ್ರಸ್ತರಾದವರಿಗೆ ಹಾಗೂ ಅವರ ಅವಲಂಬಿತರಿಗೆ ಪರಿಹಾರ ನೀಡಲು ಸಂತ್ರಸ್ತ ಪರಿಹಾರ ಯೋಜನೆ (Victim Compensation Scheme) ಕಾರ್ಯಗತಗೊಳಿಸಿ ಆದೇಶಿಸಿದೆ.

ಎಷ್ಟು ಪರಿಹಾರ?; ಪ್ರಾಣ ಹಾನಿ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 5 ಲಕ್ಷ ರೂ.ಗಳಲ್ಲಿ. ಅನ್ವಯಿಸುವ ಗರಿಷ್ಠ ಪರಿಹಾರ ಮೊತ್ತ 10 ಲಕ್ಷ ರೂ.ಗಳು. ಪುನರ್ವಸತಿ ಕಲ್ಪಿಸುವಂತಹ ತೀರ್ವತರವಾದ ಗಾಯ ಅಥವ ಇತರೆ ಮಾನಸಿಕ ಹಾನಿ/ ತೊಂದರೆ 1 ಲಕ್ಷ ರೂ. ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ, ಗರಿಷ್ಠ ಮೊತ್ತ 2 ಲಕ್ಷ ರೂ.ಗಳು.

ಕೈಕಾಲು ಹಾಗೂ ಇತರೆ ದೇಹ ಭಾಗದ ಅಂಗಾಗಗಳು, ಖಾಯಂ/ ಭಾಗಶಃ ಶೇಕಡಾ 80ರಷ್ಟು ಅಂಗ ವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 2 ಲಕ್ಷ ರೂ.ಗಳು. ಗರಿಷ್ಠ ಮೊತ್ತ 5 ಲಕ್ಷ ರೂ.ಗಳು. ಕೈಕಾಲು ಹಾಗೂ ಇತರೆ ದೇಹ ಭಾಗದ ಅಂಗಾಗಳು ಖಾಯಂ/ ಭಾಗಶಃ ಶೇಕಡಾ 40 ರಿಂದ 80 ರಷ್ಟು ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 2 ಲಕ್ಷ ರೂ., ಗರಿಷ್ಠ 4 ಲಕ್ಷ ರೂ.ಗಳು.

ಕೈಕಾಲು ಹಾಗೂ ಇತರೆ ದೇಹದ ಭಾಗದ ಅಂಗಾಗಗಳು ಖಾಯಂ/ ಭಾಗಶಃ ಶೇಕಡಾ 20 ರಿಂದ 40ರಷ್ಟು ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 1 ಲಕ್ಷ ರೂ.ಗಳು, ಗರಿಷ್ಠ ಮೊತ್ತ 3 ಲಕ್ಷ ರೂ.ಗಳು. ಕೈ ಕಾಲು ಹಾಗೂ ಇತರೆ ದೇದ ಭಾಗದ ಅಂಗಾಗಳು ಖಾಯಂ/ ಭಾಗಶಃ ಶೇಕಡಾ 20ಕ್ಕಿಂತ ಕಡಿಮೆ ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 1 ಲಕ್ಷ ರೂ.ಗಳು, ಗರಿಷ್ಠ ಮೊತ್ತ 2 ಲಕ್ಷ ರೂ.ಗಳು.

ಗುಂಪು ಹತ್ಯೆ/ ಗುಂಪು ಗಲಭೆ ಸಂತ್ರಸ್ತ್ರ ಪರಿಹಾರ ಯೋಜನೆ ಅಡಿ ಪರಿಹಾರವನ್ನು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ- 2011ರಡಿ ಸ್ಥಾಪಿಸಲಾಗಿರುವ ಪರಿಹಾರ ನಿಧಿಯಿಂದ ಪಾವತಿಸತಕ್ಕದ್ದು ಹಾಗೂ ಪರಿಹಾರದ ಮೊತ್ತ ನಿರ್ಣಯ ಮತ್ತು ಪಾವತಿ ಬಗ್ಗೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011ರಡಿಯಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು ಎಂದು ಆದೇಶ ಹೇಳಿದೆ.

Latest Indian news

Popular Stories