ಮಂಗಳೂರಿನಲ್ಲಿ ಮೋದಿ ಬೃಹತ್ ರೋಡ್ ಶೋ

ಮಂಗಳೂರು: ಮಂಗಳೂರಿನ‌ ಲೇಡಿ ಹಿಲ್‌ನಲ್ಲಿರುವ ನಾರಾಯಣ ಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಆದಿತ್ಯವಾರ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಅಭಿಮಾನಿಗಳು ಮೋದಿಯನ್ನು ಬರಮಾಡಿಕೊಂಡರು.

ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಸಾಗಿದ ರೋಡ್ ಶೋ ಲಾಲ್ ಬಾಗ್, ಪಿವಿಎಸ್ ದಾಟಿ ನವಭಾರತ್ ಸರ್ಕಲ್ ನಲ್ಲಿ ಕೊನೆಗೊಂಡಿತು.

ರೋಡ್ ಶೋ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಮಾರು 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಸ್ ಪಿ ಜಿ ಅಧಿಕಾರಿಗಳು ನಗರದೆಲ್ಲೆಡೆ ವಿಶೇಷ ನಿಗಾ ವಹಿಸಿದ್ದು ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

Latest Indian news

Popular Stories