ವಿಜಯಪುರ : ಕಳೆದ 9 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ರೈಲ್ವೇ ಜಾಲ ವಿಸ್ತರಣೆ, ರೈಲ್ವೇ ಮೇಲ್ಸೆತುವೆ ಸೇರಿದಂತೆ ಒಟ್ಟು 1322 ಕೋಟಿ ರೂ.ಗಳನ್ನು ಖರ್ಚು ಮಾಡಿ ವಿವಿಧ ರೀತಿಯ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಕಳೆದ 9 ವರ್ಷಗಳ ಅವಧಿಯಲ್ಲಿ ರೈಲ್ವೇ ವಲಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಕಳೆದ ಹಲವಾರು ವರ್ಷಗಳಿಂಧ ವಿಜಯಪುರ ರೈಲ್ವೇ ವಲಯ ಅಭಿವೃದ್ಧಿಯಿಂದ ವಂಚಿತವಾಗಿತ್ತು, ಹೀಗಾಗಿ ಕಳೆದ 9 ವರ್ಷಗಳ ಅವಧಿಯಲ್ಲಿ ರೈಲ್ವೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂದರು.
ಪ್ರಮುಖವಾಗಿ ಸೋಲಾಪುರ ಮತ್ತು ವಂದಾಲ್ ನಿಲ್ದಾಣಗಳ ನಡುವೆ ವಿದ್ಯುದ್ದೀಕರಣದೊಂದಿಗೆ ಡಬ್ಲಿಂಗ್ ಪೂರ್ಣಗೊಳಿಸಲಾಗಿದೆ. ವಂದಾಲ್ ಮತ್ತು ಗದಗ ನಿಲ್ದಾಣಗಳ ನಡುವಿನ ಕಾಮಗಾರಿ ಭರದಿಂದ ಸಾಗಿದ್ದು, ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಇದು ಪೂರ್ಣಗೊಂಡ ನಂತರ ವಿಜಯಪುರ ಮತ್ತು ಬೆಂಗಳೂರು ಮತ್ತು ಇತರ ಎಲ್ಲ ರೈಲುಗಳನ್ನು ಎಲೆಕ್ಟಿçಕ್ ರೈಲುಗಳು ಓಡಲು ಸಾಧ್ಯವಾಗುತ್ತದೆ, ಈ ಕಾರ್ಯ ಪೂರ್ಣಗೊಳ್ಳುವುದರಿಂದ ಸಮಯದ ಮಿತ ವ್ಯಯ ಹಾಗೂ ಪರಿಸರ ಸ್ನೇಹಿ ಸಂಚಾರ ಸಾಧ್ಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅದೇ ತೆರನಾಗಿ ವಿಜಯಪುರ-ಹೈದರಾಬಾದ್ (ರೈಲು ಸಂಖ್ಯೆ 17029/17030) ಮತ್ತು ರಾಜಯಪುರ-ರಾಯಚೂರು (ರೈಲು ಸಂಖ್ಯೆ 07663/07654) ನಡುವೆ ಈಗಾಗಲೇ ಎಲೆಕ್ಟ್ರಿಕ್ ರೈಲುಗಳು ಸಂಚರಿಸುತ್ತಿವೆ. ಕೂಡಗಿ ಉಷ್ಣ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸುವ ಗೂಡ್ಸ್ ರೈಲುಗಳು ವಿದ್ಯುತ್ ಲೋಕೋದಿಂದ ಚಲಿಸುತ್ತಿವ ಬಾಗಲಕೋಟೆ ರಸ್ತೆಯ ವಜ್ರ ಹನುಮಾನ್ ನಗರ ಮತ್ತು ಬಾಗೇವಾಡಿ ರಸ್ತೆಯ ಇಬ್ರಾಹಿಂಪುರದಲ್ಲಿ ರೈಲ್ವೆ ಮೇಲೆ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಮೇಲ್ಸೆತುವೆ ಕಾಮಗಾರಿ ಸಹ ಭರದಿಂದ ಸಾಗಿದ್ದು, ಇಂಡಿ ರಸ್ತೆಯಲ್ಲಿರುವ ಕಿರಾಣಾ ಮಾರುಕಟ್ಟೆಯ ಬಳಿ ಆರ್ಓಬಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.
ಸಿಮೆಂಟ್, ರಸಗೊಬ್ಬರಗಳು, ಆಹಾರ ಧಾನ್ಯಗಳು ಮತ್ತು ಇತರ ಸರಕುಗಳನ್ನು ಸಾಗಿಸುವ ರೈಲುಗಳ ಎಲ್ಲಾ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮೊದಲಾದ ಕಾರ್ಯಗಳನ್ನು ನಿರ್ವಹಿಸಲು 20 ಕೋಟಿ ರೂ. ವೆಚ್ಚದಲ್ಲಿ ಅಲಿಯಾಬಾದ್ ಬಳಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಗೂಡ್ಸ್ ಶೆಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ವಿಜಯಪುರ ಅಮೃತ ನಿಲ್ದಾಣಕ್ಕೆ ಸೇರ್ಪಡೆ:
ಅಮೃತ ನಿಲ್ದಾಣ ಯೋಜನೆಯಡಿಯಲ್ಲಿ ವಿಜಯಪು ರೈಲ್ವೇ ನಿಲ್ದಾಣ ಸೇರ್ಪಡೆಯಾಗಿದೆ, ಈ ನಿಟ್ಟಿನಲ್ಲಿ 28 ಕೋಟಿ ರೂ.ಗೂ ಅಧಿಕ ಹಣದಲ್ಲಿನಿಲ್ದಾಣದ ಯಾರ್ಡ್ ಆಧುನೀಕರಿಸುವ ಕೆಲಸ ಪ್ರಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ, ವಿಜಯಪುರದಲ್ಲಿಯೇ ರೈಲುಗಳ ನಿರ್ವಹಣೆಗಾಗಿ ನಿಲ್ದಾಣವು 4 ಪ್ಲಾಟ್ ಫಾರ್ಮ್ ಮತ್ತು ಫಿಟ್ಲೈನ್ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ವಿಜಯಪುರದಿಂದ ತಿರುಪತಿ, ವಿಜಯವಾಡ ಅಥವಾ ಕನ್ಯಾಕುಮಾರಿ ಮುಂತಾದ ವಿಜಯಪುರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರದ ಅನೇಕ ನಿಲ್ದಾಣಗಳಿಗೆ ನೇರವಾಗಿ ಹೊಸ ರೈಲುಗಳನ್ನು ಪ್ರಾರಂಭಕ್ಕೆ ದಾರಿಯಾಗಲಿದೆ ಎಂದರು.
ಸೂಫರ್ಫಾಸ್ಟ್ ರೈಲು ವಿಸ್ತರಣೆ:
ಮುಂಬೈ-ಗದಗ ದೈನಂದಿನ ಸೂಪರ್- ಫಾಸ್ಟ್ ರೈಲು (ರೈಲು ಸಂಖ್ಯೆ 11139/11140) ವಿಜಯಪುರ ಮೂಲಕ ಹೊಸಪೇಟೆವರೆಗೆ ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಜಿಗಜಿಣಗಿ ತಿಳಿಸಿದರು.
ಈ ರೈಲಿನ ಸೇವೆ ವಿಸ್ತರಣೆಯಿಂದ ವಿಜಯಪುರವನ್ನು ವಿಶ್ವ ಪರಂಪರೆಯ ನಗರಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಈ ರೈಲು ಬೆಳಿಗ್ಗೆ ಮುಂಬಯಿಂದ ವಿಜಯಪುರಕ್ಕೆ 17-30 ಕ್ಕೆ ಬಿಟ್ಟು 10-40 ಕ್ಕೆ ಗದಗ ತಲುಪಲಿದೆ. ಅಲ್ಲಿಂದ 10-45ಕ್ಕೆ ಹೊರಟು ಮದ್ಯಾನ 12-45 ಕ್ಕೆ ಹೊಸಪೇಟೆ ತಲುವಲಿದ ಪುನಃ ಅದೇ ರೈಲು ಮದ್ಯಾನ 02-00 ಗಂಟೆಗೆ ಹೊರಟು ಗದಗ ತಲುಪಿ, ಮಧ್ಯಾಹ್ನ 03.25 ಕ್ಕೆ ವಿಜಯಪುರಕ್ಕೆ, ಅಂದಾಜು ಸಾಯಂಕಾಲ 06.30 ಬಂದು ನಂತರ ಸೋಲಾಪುರ ಮಾರ್ಗವಾಗಿ ಬೆಳಿಗೆ, 05-10 ಕ್ಕೆ ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್ ತಲುಪುತ್ತದೆ, ಇದರಿಂದ ವಿಜಯಪುರ ಮುಂಬಯಿ ನಡುವಣ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದರು. ಸೊಲ್ಲಾಪುರ -ಗದಗ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 11305/11306) ಶೀಘ್ರದಲ್ಲೇ ಹೊಸಪೇಟೆವರೆಗೆ ವಿಸ್ತರಿಸಲಾಗುವುದು ಎಂದರು.