ಫಂಡರಪುರಕ್ಕೆ ರೈಲು : ಪಾಂಡುರಂಗ ವಿಠ್ಠಲನ ದರ್ಶನ ಇನ್ನು ಬಲು ಸುಲಭ

ವಿಜಯಪುರ : ಮೈಸೂರು-ಸೊಲ್ಲಾಪೂರ ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಶೀಘ್ರವೇ ಸುಕ್ಷೇತ್ರ ಫಂಡರಪುರಕ್ಕೆ ವಿಸ್ತರಣೆ ಮಾಡಲಾಗುವುದು, ಆಮೂಲಕ ಸುಲಭವಾಗಿ ಫಂಡರಪುರಕ್ಕೆ ತೆರಳಿ ಪಾಂಡುರಂಗ ವಿಠ್ಠಲನ ದರ್ಶನ ಪಡೆಯುವುದು ಸುಲಭವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಫಂಡರಪುರಕ್ಕೆ ರೈಲ್ವೇ ಸೌಲಭ್ಯ ಕಲ್ಪಿಸುವುದು ಜನರ ಬಹುದಿನಗಳ ಬೇಡಿಕೆಯಾಗಿತ್ತು, ಈಗ ಭಕ್ತರ ಬೇಡಿಕೆ ಈಡೇರಲಿದ್ದು, ಪಾಂಡುರಂಗ ವಿಠ್ಠಲನ ದರ್ಶನ ಪಡೆಯುವುದು ಸುಲಭವಾಗುತ್ತದೆ. ಮುಖ್ಯವಾಗಿ ವಿಜಯಪುರ & ಸೋಲಾಪುರ ನಡುವ ಈ ರೈಲಿನ ಪ್ರಯಾಣದ ಅವಧಿ ಈಗಿರುವ ಮೂರು ತಾಸಿನ ಬದಲಾಗಿ ಕೇವಲ ಗಂಟೆಯಾಗಲಿದೆ. ಈ ರೈಲು ಬೆಳಿಗ್ಗೆ 08-30 ಕ್ಕೆ ವಿಜಯಪುರದಿಂದ ಹೊರಟು ಸೋಲಾಪುರ 12-10 ಕ್ಕೆ ಬದಲಾಗಿ 10-15ಕ್ಕೆ ತಲುಪಿ ನಂತರ ಮಧ್ಯಾನ್ನ 12-25ಕ್ಕೆ ಪಂಢರಪುರ ತಲುಪಲಿದೆ. ಪುನಃ ಅದೇ ರೈಲು ಮಧ್ಯಾನ್ಯ 01-00 ಕ್ಕೆ ಹೊರಟು ಸೋಲಾಪುರ 1-30 ಕ್ಕೆ ಹಾಗೂ ವಿಜಯಪುರಕ್ಕೆ ಸಾಯಂಕಾಲ 05- 45 ಬರಲಿದೆ. ನಂತರ ಎಂದಿನಂತೆ ಬೆಂಗಳೂರ ಕಡೆ ಹೊರಡುತ್ತಿದೆ ಎಂದು ವಿವರಿಸಿದರು.
ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ದೈನಂದಿನ ರೈಲು (ರೈಲು ಸಂಖ್ಯೆ 07377/07378) ಉತ್ತರ ಕರ್ನಾಟಕದಿಂದ ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ರೈಲು ಈ ರೈಲನ್ನು ಸಾಮಾನ್ಯ ರೈಲಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವ, ಈ ರೈಲು ವಿಜಯಪುರ ಭಾಗದ ಪ್ರಯಾಣಿಕರಿಗೆ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮತ್ತು ಸುತ್ತಮುತ್ತಲಿನ ಇತರ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಮಂಗಳೂರು ಶ್ರೇಣೀ ಮತ್ತು ವಾಣಿಜ್ಯ ಕೇಂದ್ರವಾಗಿರುವುದರಿಂದ ಜನರು ಆರಾಮದಾಯಕ ರೈಲು ಪ್ರಯಾಣದೊಂದಿಗೆ ಈ ಸ್ಥಳವನ್ನು ತಲುಪಲು ಉಪಯುಕ್ತವಾಗಿದೆ
ವಿಜಯಪುರ ಹುಬ್ಬಳ್ಳಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 0732/07330) ಹೊಸಪೇಟೆ ಕೊಟ್ಟೂರು ಮಾರ್ಗವಾಗಿ ವಿಜಯಪುರ-ಯಶವಂತಪುರ ಎಕ್ಸ್-ಪುಸ್ ದೈನಂದಿನ ರೈಲು (ರೈಲು ಸಂಖ್ಯೆ 05515/06546) ಈ ರೈಲನ್ನು ಸಹ ಸಾಮಾನ್ಯ ರೈಲ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ವಿಜಯಪುರ ಸೋಲಾಪುರ ಮೂಲಕ ಹುಬ್ಬಳ್ಳಿ ವಾರಣಾಸಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 17323/17324) ವಿಶ್ವ ಪ್ರಸಿದ್ದ ಕಾಶಿ ವಿಶ್ವನಾಥ ದರ್ಶನ ಪಡೆಯಲು ಅಥವಾ ಪ್ರಯಾಗ ರಾಜ್ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಈ ರೈಲು ಸೇವೆ ಅನುಕೂಲ ಒದಗಿಸಲಿದೆ ಎಂದರು.
ವಿಜಯಪುರ ಮತ್ತು ಸೊಲ್ಲಾಪೂರ ಮೂಲಕ ಹುಬ್ಬಳ್ಳಿ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್-ಫಾಸ್ಟ್ ರೈಲು ರೈಲು ಸಂಖ್ಯೆ 20657/20658) .ನಮ್ಮ ಕರ್ನಾಟಕದ ಭಾಗದೊಂದಿಗೆ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕವನ್ನು ಹೊಂದಲು ಈ ಹಿಂದಿನಿಂದಲೂ ಪ್ರಯತ್ನ ಮುಂದುವರೆದಿದ್ದು, ವಿಜಯಪುರದ ಜನರಿಗೆ ಅತ್ಯಂತ ಅನುಕೂಲಕರ ಸಮಯದೊಂದಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದ್ದು, ಈ ರೈಲಿನ ಫ್ರಿಕ್ವೆನ್ಸಿ ಹೆಚ್ಚಿಸಲು ಈಗಾಗಲೇ ರೈಲ್ವೇ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ರೈಲಿನ ಸಂಚಾರ ವಾರಕ್ಕೆ ಎರಡು ಅಥವಾ ಮೂರು ಬಾರಿ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ, ರಾಕೇಶ ಕುಲಕರ್ಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories