ಉದ್ರೇಕಕಾರಿ ಭಾಷಣ ಮಾಡಿದ ಆರೋಪ: ಮುಫ್ತಿ ಸಲ್ಮಾನ್ ಅಝ್ಹರಿ ಬಂಧನ

ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಮತ್ತು ಗುಜರಾತ್ ಪೊಲೀಸರು ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಮುಂಬೈನಲ್ಲಿ ಭಾನುವಾರ ಬಂಧಿಸಿದ್ದಾರೆ.

ಮುಫ್ತಿ ಸಲ್ಮಾನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ಬೆಂಬಲಿಗರು ಠಾಣೆಯ ಹೊರಗೆ ಜಮಾಯಿಸಿದ್ದರು. ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಅವರನ್ನು ಬಂಧಿಸಲಾಯಿತು.

ಮೌಲ್ವಿಗಳು ಪೊಲೀಸ್ ಠಾಣೆಯ ಒಳಗಿನಿಂದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಪ್ರತಿಭಟನೆ ಮಾಡದಂತೆ ಕೇಳಿಕೊಂಡರು.

“ನಾನೇನೂ ಕ್ರಿಮಿನಲ್ ಅಲ್ಲ, ಅಥವಾ ಅಪರಾಧ ಎಸಗಿದ್ದಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿಲ್ಲ. ಅವರು ಅಗತ್ಯವಿರುವ ತನಿಖೆಯನ್ನು ಮಾಡುತ್ತಿದ್ದಾರೆ ಮತ್ತು ನಾನು ಸಹ ಅವರಿಗೆ ಸಹಕರಿಸುತ್ತಿದ್ದೇನೆ. ನಾನು ತಪ್ಪು ಮಾಡಿದ್ದರೆ ಬಂಧಿಸಲಿ” ಎಂದು ಮುಫ್ತಿ ಸಲ್ಮಾನ್ ಅಝ್ಹರಿ ಹೇಳಿದ್ದಾರೆ.

Latest Indian news

Popular Stories