ವಿಜಯಪುರ: ವ್ಯಕ್ತಿಯೋರ್ವನ್ನು ಬರ್ಬರವಾಗಿ ಹತ್ಯೆಗೈದು, ತುಂಡುತುಂಡಾಗಿ ಕತ್ತರಿಸಿ ಭಾವಿಯಲ್ಲಿ ಎಸೆದು ಹೋಗಿರುವ ಘಟನೆ ಬಸವನಾಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಇಂಗಳೇಶ್ವರ ನಾಕಾ ರಸ್ತೆಯ ಬಳಿಯ ಬಾವಿಯಲ್ಲಿ ಹತ್ಯೆಗೈದಿರುವನ್ನು ಕಡಿದು ದೇಹವನ್ನು ಬೀಸಾಕಿ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ ಮೂಲಗಳ ಪ್ರಕಾರ ಮಾಹಿತಿ ಲಭ್ಯವಾಗಿದೆ. ಇನ್ನು ಈ ಶವ ಮಹಿಳೆಯದ್ದೋ, ಪುರುಷರದ್ದೋ ಎನ್ನವ ಮಾಹಿತಿ ಲಭ್ಯವಾಗಿಲ್ಲ.
ಅಲ್ಲದೇ, ಕಳೆದ ಎರಡು ತಿಂಗಳ ಹಿಂದೆಯೇ ಈ ವ್ಯಕ್ತಿಯನ್ನು ಹತ್ಯೆಗೈದು ಆ ದೇಹವನ್ನು ಕತ್ತರಿಸಿ ಬಾವಿಯಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.