
Featured StoryDakshina Kannada
ಡಿಕೆಶಿ ಪ್ರಾಮಾಣಿಕರಾಗಿದ್ದರೆ ಕೇಸ್ ಹಿಂಪಡೆದಿದ್ದೇಕೆ: ನಳಿನ್ ಪ್ರಶ್ನೆ
ಮಂಗಳೂರು: ಸಚಿವ ಸಂಪುಟದಲ್ಲಿ ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದಲ್ಲಿ ಪ್ರತಿಕ್ರಯಿಸಿರುವ ಸಂಸದ ನಳಿನ್ ಕುಮಾರ್, ಇವರು ಪ್ರಾಮಾಣಿಕರು, ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆಯುವ ಅಗತ್ಯವಿಲ್ಲ. ಇವರಿಗೆ ಭಯ ಯಾಕೆ, ಇವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಿಬಿಐ ತನಿಖೆ ಹೊತ್ತಲ್ಲಿ ಸರ್ಕಾರ ಕೇಸ್ ಅನ್ನು ವಾಪಾಸ್ ತೆಗೆಯೋದು ಸರಿಯಲ್ಲ. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಹಾಗಂತ ಇದೊಂದೇ ಕೇಸ್ ಇಲ್ಲ, ಇಡಿಯಲ್ಲೂ ಸಾಕಷ್ಟು ಕೇಸ್ ಗಳಿವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.




