Featured Story

ಪತ್ರಿಕಾ ಸ್ವಾತಂತ್ರ್ಯ ಹರಣಗೈಯುತ್ತಿರುವ ಅಂತರಾಷ್ಟ್ರೀಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು!

ನವದೆಹಲಿ: ರಿಪೋರ್ಟರ್ ವಿಥ್’ಔಟ್ ಬಾರ್ಡರ್(ಆರ್‌ಎಸ್‌ಎಫ್) ಸಂಸ್ಥೆಯು ಪತ್ರಿಕಾ ಸ್ವಾತಂತ್ರ್ಯದ ಹರಣ ನಡೆಸಿರುವ ಆರೋಪದಲ್ಲಿ 37 ರಾಷ್ಟ್ರಗಳ ಮುಖ್ಯಸ್ಥರ ಹೆಸರನ್ನು ಪಟ್ಟಿ ಮಾಡಲಾಗಿದ್ದು ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೂಡ ಇದೆ.

ಪ್ರಧಾನಿ ನರೇಂದ್ರ ಮೋದಿಯವರು ನಿಕಟ ಸಂಬಂಧ ಹೊಂದಿರುವ ಉದ್ಯಮಿಗಳ ಬಳಿಯಿರುವ ಮಾಧ್ಯಮ ಸಾಮ್ರಾಜ್ಯ ಬಳಸಿ ಅವರ ಸಿದ್ಧಾಂತವನ್ನು ಪ್ರಸಾರ ಮಾಡಲಾಗಿದೆ. ಅದರೊಂದಿಗೆ ಅತ್ಯಂತ ಧಾರ್ಮಿಕ ವಿಭಜನಕಾರಿ ಭಾಷಣಗಳನ್ನು ಮಾಧ್ಯಮಗಳನ್ನು ಬಳಸಿ ಪ್ರಚುರ ಪಡಿಸಲಾಯಿತು ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ದಿ ವೈರ್ ತಿಳಿಸಿದೆ.

ಜಗತ್ತಿನ ಪತ್ರಿಕಾ ಸ್ವಾತಂತ್ರ್ಯದ ಇಂಡೆಕ್ಸ್’ನಲ್ಲಿ ಭಾರತ 180 ದೇಶಗಳ ಪಟ್ಟಿಯಲ್ಲಿ 142 ಸ್ಥಾನದಲ್ಲಿದೆಯೆಂದು ಆರ್.ಎಸ್.ಎಫ್ ತಿಳಿಸಿದೆ. ಮೋದಿಯೊಂದಿಗೆ ಪಟ್ಟಿಯಲ್ಲಿ ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್, ಪಾಕಿಸ್ತಾನದ ಇಮ್ರಾನ್ ಖಾನ್, ಮಯನ್ಮಾರದ ಮಿನ್ ಆಂಗ್ ಸೇರಿ 32 ಮಂದಿಯ ಹೆಸರಿದೆ. ಇವರೆಲ್ಲರೂ ಕೂಡ ಪತ್ರಿಕಾ ಸ್ವಾತಂತ್ರ್ಯದ ಹರಣದೊಂದಿಗೆ ಪತ್ರಕರ್ತರನ್ನು ಧಮನಿಸುವ ಯತ್ನದಲ್ಲಿ ಜೈಲಿಗೆ ತಳಿದ್ದಾರೆ. ಕೊಲೆಯ ಆಪಾದನೆ ಹೊರಿಸಿದ್ದಾರೆಂದು ವರದಿಯಲ್ಲಿ ಆರೋಪಿಸಲಾಗಿದೆ.

ಈ ವರದಿಯು ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ದುರಾಚರಗಳ ಮೇಲೆ ಬೆಳಕು ಚೆಲ್ಲಿದ್ದು,2017 ರಲ್ಲಿ ಹತ್ಯೆಗೈಯಲ್ಪಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹಿಂದುತ್ವದ ಸಂತ್ರಸ್ಥೆ ಎಂದು ಉಲ್ಲೇಖಿಸಿದೆ. ರಾಣಾ ಅಯ್ಯುಬ್, ಬರ್ಖಾ ದತ್ತ್ ವಿರುದ್ಧ ಹಿಂದುತ್ವ ಕಾರ್ಯಕರ್ತರ ಬೆದರಿಕೆ ಕರೆ, ಅತ್ಯಾಚಾರದ ಬೆದರಿಕೆ ಸೇರಿದಂತೆ ಅವರ ವಿರುದ್ದ ನಡೆದುಕೊಂಡ ರೀತಿಯನ್ನು ಕೂಡ ವರದಿ ಬೆಳಕು ಚೆಲ್ಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button