
ನಾಸಿಮ್ ಫೌಂಡೇಶನ್’ನಿಂದ USA (ಅಮೇರಿಕಾದ) ದಲ್ಲಿ ಶೈಕ್ಷಣಿಕ ಸಮ್ಮೇಳನ: ಕನ್ನಡಿಗರಾದ ಡಾ. ಅಬ್ದುಲ್ ಖದೀರ್ ಮತ್ತು ಸೈಯದ್ ಬ್ಯಾರಿಗೆ ಆಹ್ವಾನ
ಟೆಕ್ಸಾಸ್ – ಶೈಕ್ಷಣಿಕ ಕಾರ್ಯಚಟುವಟಿಗಳಲ್ಲಿ ತೊಡಗಿಸಿಕೊಂಡಿರುವ ಹೆಸರಾಂತ ಸಂಸ್ಥೆಯಾದ NASIM ಫೌಂಡೇಶನ್, ಟೆಕ್ಸಾಸ್ನಲ್ಲಿ ಪ್ರತಿಷ್ಠಿತ ಶ್ರೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. ಸಮ್ಮೇಳನಕ್ಕೆ ಪ್ರಪಂಚದಾದ್ಯಂತದ ಗೌರವಾನ್ವಿತ ಭಾಷಣಕಾರರನ್ನು ಆಹ್ವಾನಿಸುತ್ತಿದೆ. ಈ ಬಹು ನಿರೀಕ್ಷಿತ ಕಾರ್ಯಕ್ರಮವನ್ನು ನವೆಂಬರ್ 11, 2023 ರಂದು ನಿಗದಿಪಡಿಸಲಾಗಿದೆ. ಜಾಗತಿಕ ಸಂವಾದದ ಮುಂಚೂಣಿಯಲ್ಲಿರುವ ವಿಮರ್ಶಾತ್ಮಕ ಶೈಕ್ಷಣಿಕ ವಿಷಯಗಳನ್ನು ಅನ್ವೇಷಿಸಲು ಉತ್ಸುಕರಾಗಿರುವ ವಿವಿಧ ಹಿನ್ನೆಲೆಗಳಿಂದ ಶಿಕ್ಷಕರು, ವಿದ್ವಾಂಸರು ಮತ್ತು ವೃತ್ತಿಪರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
NASIM ಫೌಂಡೇಶನ್ ಸಮ್ಮೇಳನಕ್ಕೆ ಇಬ್ಬರು ಕನ್ನಡಿಗರನ್ನು ಆಹ್ವಾನಿಸಿರುವುದು ಗಮನಾರ್ಹ. ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಅಧ್ಯಕ್ಷರಾದ ಡಾ. ಅಬ್ದುಲ್ ಖಾದೀರ್ ಮತ್ತು ಬ್ಯಾರಿಸ್ ಗ್ರೂಪ್ನ ಅಧ್ಯಕ್ಷರಾದ ಸೈಯದ್ ಬ್ಯಾರಿ ಅವರು ತಮ್ಮ ಒಳನೋಟಗಳು ಮತ್ತು ಪರಿಣತಿಯನ್ನು ಈ ಕಾರ್ಯಕ್ರಮದ ಅತಿಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯ ಮುಂದಾಳುವಾಗಿರುವ ಡಾ.ಅಬ್ದುಲ್ ಖದೀರ್ ಅವರು ಶಿಕ್ಷಣ ಜಗತ್ತಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಾ ಬಂದಿದ್ದಾರೆ.ಡೆಟ್ರಾಯಿಟ್, ಒರ್ಲ್ಯಾಂಡೊ, ಚಿಕಾಗೊ, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ನ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಮ್ಮೇಳನಗಳ ಸಮಗ್ರ ಸರಣಿಯ ಭಾಗವಾಗಿ ಈ ಸಮಾರಂಭದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿದೆ.
ಬ್ಯಾರೀಸ್ ಗ್ರೂಪ್ನ ಅಧ್ಯಕ್ಷರಾದ ಸೈಯದ್ ಬ್ಯಾರಿ ಅವರು ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ವಿಶಿಷ್ಟ ವ್ಯಕ್ತಿತ್ವ. ಎರಡೂ ಕ್ಷೇತ್ರಗಳಲ್ಲಿನ ಅವರ ವ್ಯಾಪಕ ಅನುಭವವು ವ್ಯಾಪಾರ ಮತ್ತು ಶಿಕ್ಷಣದ ನಡುವಿನ ಸಂಬಂಧ ಅನ್ವೇಷಿಸಲು ಅಮೂಲ್ಯವಾದ ಸಂಪನ್ಮೂಲವಾಗಿದ್ದಾರೆ. ಈ ಎರಡು ವಿಭಾಗಗಳ ನಡುವಿನ ಸಂಬಂಧದ ಬಗ್ಗೆ ಆಳವಾದ ತಿಳುವಳಿಕೆಯನ್ನು ಇವರ ಮಾತುಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ಈ ಸಮ್ಮೇಳನದಲ್ಲಿ ಕರ್ನಾಟಕದ ಡಾ. ಅಬ್ದುಲ್ ಖದೀರ್ ಮತ್ತು ಸೈಯದ್ ಬ್ಯಾರಿ ಭಾಗವಹಿಸುವುದು. ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ ಮತ್ತು ಭಾರತದಲ್ಲಿ ಮುಸ್ಲಿಮರು ಶ್ರೈಕ್ಷಣಿಕ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಮುಂದಿರುವ ಅವಕಾಶಗಳ ಮೇಲೆ ಬೆಳಕು ಚೆಲ್ಲಲ್ಲಿದ್ದಾರೆ.




