2022 ರಲ್ಲಿ ಭಾರತದಲ್ಲಿ 28,522 ಕೊಲೆ ಪ್ರಕರಣಗಳು ದಾಖಲಾಗಿವೆ, ಪ್ರತಿದಿನ 78 ಕೊಲೆ ಪ್ರಕರಣ: ಎನ್.ಸಿ.ಆರ್.ಬಿ ವರದಿ

ಹೊಸದಿಲ್ಲಿ : 2022 ರಲ್ಲಿ ಒಟ್ಟು 28,522 ಕೊಲೆಗಳ ಪ್ರಕರಣಗಳು (FIR) ದಾಖಲಾಗಿವೆ. ಪ್ರತಿ ದಿನ ಸರಾಸರಿ 78 ಕೊಲೆಗಳು ಅಥವಾ ಭಾರತದಾದ್ಯಂತ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದು 2021 ರಲ್ಲಿ 29,272 ಮತ್ತು 2020 ರಲ್ಲಿ 29,193 ಪ್ರಕರಣಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ ಎಂದು NCRB ವರದಿ ಬೆಳಕು ಚೆಲ್ಲಿದೆ.

9,962 ಪ್ರಕರಣದಲ್ಲಿ ಕೊಲೆಗೆ ಪ್ರಮುಖ ಕಾರಣ ಹಲವು ವಿವಾದಗಳಾಗಿವೆ. ನಂತರ 3,761 ಪ್ರಕರಣಗಳಲ್ಲಿ ‘ವೈಯಕ್ತಿಕ ದ್ವೇಷ ಮತ್ತು 1,884 ಪ್ರಕರಣಗಳಲ್ಲಿ ‘ಲಾಭ’ದ ಕಾರಣಕ್ಕೆ ನಡೆದ ಕೊಲೆಗಳು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ಅಪರಾಧ ವರದಿಯಲ್ಲಿನ ಅಂಕಿಅಂಶಗಳು ತಿಳಿಸಿವೆ. NCRB ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು ಅಪರಾಧ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತದೆ.

ಎನ್‌ಸಿಆರ್‌ಬಿ ಪ್ರಕಾರ ದೇಶಾದ್ಯಂತ ಪ್ರತಿ ಲಕ್ಷ ಜನಸಂಖ್ಯೆಗೆ ಕೊಲೆಯ ಪ್ರಮಾಣ 2.1 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಆರೋಪ ಪಟ್ಟಿ ಪ್ರಮಾಣ 81.5 % ದಷ್ಟಿದೆ.

ಉತ್ತರ ಪ್ರದೇಶವು 2022 ರಲ್ಲಿ 3,491 ಪ್ರಕರಣ ದಾಖಲಿಸಿದೆ.ನಂತರ ಬಿಹಾರ (2,930), ಮಹಾರಾಷ್ಟ್ರ (2,295), ಮಧ್ಯಪ್ರದೇಶ (1,978) ಮತ್ತು ರಾಜಸ್ಥಾನ (1,834), ಅಗ್ರ ಐದು ರಾಜ್ಯಗಳು ಒಟ್ಟಾಗಿ 43.92 ರಷ್ಟು ಕೊಲೆ ಪ್ರಕರಣಗಳನ್ನು ಹೊಂದಿವೆ.

ಎನ್‌ಸಿಆರ್‌ಬಿ ಪ್ರಕಾರ, 2022 ರಲ್ಲಿ ಕಡಿಮೆ ಕೊಲೆ ಪ್ರಕರಣಗಳನ್ನು ಹೊಂದಿರುವ ಮೊದಲ ಐದು ರಾಜ್ಯಗಳು ಸಿಕ್ಕಿಂ (9), ನಾಗಾಲ್ಯಾಂಡ್ (21), ಮಿಜೋರಾಂ (31), ಗೋವಾ (44), ಮತ್ತು ಮಣಿಪುರ (47) ಆಗಿದೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2022 ರಲ್ಲಿ 509 ಕೊಲೆ ಪ್ರಕರಣಗಳು ದಾಖಲಾಗಿವೆ. ನಂತರ ಜಮ್ಮು ಮತ್ತು ಕಾಶ್ಮೀರ (99), ಪುದುಚೇರಿ (30), ಚಂಡೀಗಢ (18), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (16), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (7), ಲಡಾಖ್ (5) ಮತ್ತು ಲಕ್ಷದ್ವೀಪ (ಶೂನ್ಯ) ಕೊಲೆಯಾಗಿದೆ.

2022 ರಲ್ಲಿ ಭಾರತದಾದ್ಯಂತ, ಜಾರ್ಖಂಡ್ (4), ಅರುಣಾಚಲ ಪ್ರದೇಶ (3.6), ಛತ್ತೀಸ್‌ಗಢ ಮತ್ತು ಹರಿಯಾಣ (ಎರಡೂ 3.4), ಅಸ್ಸಾಂ ಮತ್ತು ಒಡಿಶಾ (ಎರಡೂ 3) ನಲ್ಲಿ ಕೊಲೆ ಪ್ರಮಾಣವು ಅತ್ಯಧಿಕವಾಗಿದೆ.

ಉತ್ತರ ಪ್ರದೇಶ (1.5), ಬಿಹಾರ (2.3), ಮಹಾರಾಷ್ಟ್ರ (1.8), ಮಧ್ಯಪ್ರದೇಶ (2.3) ಮತ್ತು ರಾಜಸ್ಥಾನ (2.3) ಪ್ರತಿ ಲಕ್ಷ ಜನಸಂಖ್ಯೆಗೆ ಕೊಲೆ ಪ್ರಮಾಣವಿದೆ.

ವಯಸ್ಸಿನ ಪ್ರಕಾರ, ಕೊಲೆಗೆ ಬಲಿಯಾದ 95.4 ಪ್ರತಿಶತ ವಯಸ್ಕರು.

ಎನ್‌ಸಿಆರ್‌ಬಿ ಪ್ರಕಾರ ಒಟ್ಟು ಕೊಲೆಯಾದವರಲ್ಲಿ, 8,125 ಮಹಿಳೆಯರು ಮತ್ತು ಒಂಬತ್ತು ತೃತೀಯ ಲಿಂಗದ ವ್ಯಕ್ತಿಗಳು, ಪುರುಷರು ಸುಮಾರು 70 ಪ್ರತಿಶತದಷ್ಟಿದ್ದಾರೆ.

Latest Indian news

Popular Stories