ನೇಜಾರು ಕೊಲೆ ಪ್ರಕರಣ | “28 ಸಾವಿರ ಹಣಕೊಟ್ಟು ಸ್ಕೂಟರ್ ಖರೀದಿಸಿದ್ದರು” – ಸಂತ್ರಸ್ಥೆಯ ತಂದೆ ನೂರ್ ಮುಹಮ್ಮದ್

ಉಡುಪಿ: ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯು ಆರೋಪಿಯ ಸ್ಕೂಟರ್ ಬಳಸುತ್ತಿದ್ದ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಈ ಕುರಿತು ಮಾತನಾಡಿದ ಸಂತ್ರಸ್ಥೆಯ ತಂದೆ ನೂರ್ ಮುಹಮ್ಮದ್ ಸ್ಕೂಟರ್’ನ್ನು ನಾವು ಅವರಿಗೆ 28 ಸಾವಿರ ರೂಪಾಯಿ ಹಣಕೊಟ್ಟು ಖರೀದಿಸಿದ್ದೇವು ಎಂದು ಹೇಳಿದರು.

ಆರೋಪಿಯು ಸಂತ್ರಸ್ಥೆ ಅಯ್ನಾಝ್’ಳ ಸಿನೀಯರ್ ಆಗಿದ್ದ ಆತ ಅಪಾರ್ಟ್ ಮೆಂಟ್ ಹುಡುಕಲು ಸಹಾಯ ಮಾಡಿದ್ದ ಅಷ್ಟೇ. ನಾನು ಕಳುಹಿಸಿದ ಹಣದಲ್ಲಿ ಅಡ್ವಾಸ್ ಕೊಟ್ಟು ಅಪಾರ್ಟ್ಮೆಂಟ್ ಬಾಡಿಗೆ ಪಡೆದಿದ್ದರು.ಇನ್ನು ಆತನ ಬಳಿಯಿದ್ದ ಹಳೆಯ ಸ್ಕೂಟರ್ ನ್ನು ಹಣಕೊಟ್ಟು ಖರೀದಿಸಿದ್ದರು. ಇನ್ನು ನೋಂದಣಿ ಮಾಡಲು ಸ್ವಲ್ಪ ತಡವಾಗಿತ್ತು ಆ ಕಾರಣಕ್ಕಾಗಿ ಆತನ ಹೆಸರಿನಲ್ಲೇ ಸ್ಕೂಟರ್ ಇತ್ತು. ಅದನ್ನು ಸಂತ್ರಸ್ಥ ಸಹೋದರಿಯರು ಸ್ಥಳೀಯವಾಗಿ ಸಂಚರಿಸಲು ಬಳಸುತ್ತಿದ್ದರು ಎಂದು ಹೇಳಿದರು.

ಶನಿವಾರ ಹತ್ಯೆಗೊಳಗಾದ ಅಯ್ನಾಝ್ ಮತ್ತು ಅಫ್ನಾನ್ ವಾಸವಿದ್ದ ಬಾಡಿಗೆ ಮನೆಗೆ ಭೇಟಿ ನೀಡಿದ ನೂರ್ ಮುಹಮ್ಮದ್, “ಅಲ್ಲಿ ನಮಾಝ್ ಮಾಡುತ್ತಿದ್ದ ಮುಸಲ್ಲಾ,ತಸ್ಬಿ, ಕುರಾನ್ ನೋಡಿದೆವು. ಅವರು ಸ್ವತಃ ಅಡುಗೆ ಮಾಡುತ್ತಿದ್ದರು. ತಾಯಿ ಸಲಹೆಯಂತೆ ಅವರು ಜೀವನ ನಡೆಸುತ್ತಿದ್ದರು. ಅಲ್ಲಿಯ ಆಕೆಯ ಡೈರಿ ಸಿಕ್ಕಿತು. ಅದರಲ್ಲಿ ಆಕೆ ಪ್ರತಿ ದಿನಚರಿಯನ್ನು ಬರೆದು ಇಡುತ್ತಿದ್ದಳು” ಎಂದು ನೋವಿನಿಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

“ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದರು. ಕೊನೆಯ ನಮಾಝ್ ಮಾಡಿದ ಕುರುಹು ಕೂಡ ಆ ಮನೆಯಲ್ಲಿ ಕಂಡಿತು. ವಾಶಿಂಗ್ ಮೆಶಿನ್, ಸ್ವಲ್ಪ ಬಟ್ಟೆ ಕೂಡ ಅಲ್ಲಿತ್ತು” ಎಂದು ಹೇಳಿದರು.

Latest Indian news

Popular Stories