ಇಂದಿನಿಂದ ಹೊಸ ಸರ್ಕಾರದ ಮೊದಲ ಅಧಿವೇಶನ

ಬೆಂಗಳೂರು: ಸೋಮವಾರದಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಸದನ ಕದನಕ್ಕೆ ವೇದಿಕೆ ಸಿದ್ಧವಾಗಿದೆ.

10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕೀಯ ಚರ್ಚೆ ಕುತೂಹಲ ಮೂಡಿಸಿದೆ.

ನಾಳೆ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಸಂಘರ್ಷದ ಭಾಷಣವೋ? ಸಮಾಧಾನದ ಭಾಷಣವೋ ಎಂಬ ಕುತೂಹಲ ಮನೆ ಮಾಡಿದೆ. ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರದ ವೇಳೆ ವರ್ಷಾರಂಭದ ಜಂಟಿ ಸದನವನ್ನುದ್ದೇಶಿಸಿ ಮೊದಲ ಭಾಷಣವನ್ನು ರಾಜ್ಯಪಾಲರು ಮಾಡಿದ್ದರು. ಆದರೀಗ ಹೊಸ ಸರ್ಕಾರದ ದೂರದೃಷ್ಟಿ, ಗೊತ್ತುಗುರಿ ಬಗ್ಗೆ ತಿಳಿಸಿ ಮತ್ತೊಮ್ಮೆ ಜಂಟಿ ಅಧಿವೇಶನ ಭಾಷಣ ನಿಗದಿಯಾಗಿದೆ.

Latest Indian news

Popular Stories