Featured StoryUdupi

ಐತಿಹಾಸಿಕ ಉಡುಪಿಯ ಹಳೆಯ ಸಬ್‌ಜೈಲು ಕಟ್ಟಡ ಉಳಿಸಲು ಕಲಾವಿದರು, ಆರ್ಕಿಟೆಕ್ಟ್ ಗಳಿಂದ ಅಭಿಯಾನ

ಉಡುಪಿ: ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರಿಸುಮಾರು 117 ವರ್ಷಗಳ ಇತಿಹಾಸ ಇರುವ ಉಡುಪಿಯ ಹಳೆಯ ಸಬ್‌ಜೈಲು ಕಟ್ಟಡ ಇನ್ನು ಕೆಲವೇ ದಿನಗಳಲ್ಲಿ ಧರೆಗೆ ಉರುಳಲಿದೆ. ಈ ಪಾರಂಪರಿಕ ಕಟ್ಟಡವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯತ್ನ ಹಾಗೂ ಅಭಿಯಾನ ಗಳು ನಡೆಯುತ್ತಿವೆ.

IMG 20230703 WA0005 Featured Story, Udupi

ಹಳೆಯ ಅತ್ಯಂತ ಸುಂದರವಾದ ಈ ಕಟ್ಟಡವನ್ನು ಉಳಿಸಲು ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರು ಮುಂದಾಗಿದ್ದಾರೆ. ಅದಕ್ಕಾಗಿ ವಿಶಿಷ್ಟ ರೀತಿಯ ಅಭಿಯಾನ ವನ್ನು ಅವರು ಹಮ್ಮಿಕೊಂಡಿದ್ದಾರೆ.
ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಕ್) ಇದರ ಮಂಗಳೂರು ಶಾಖೆ ಹಾಗೂ ಉಡುಪಿ ಉಪಶಾಖೆಯ ಏಳೆಂಟು ಸದಸ್ಯ ಆರ್ಕಿಟೆಕ್ಟ್(ವಾಸ್ತುಶಿಲ್ಪಿಗಳು)ಗಳು ಕಳೆದ ಒಂದು ವಾರಗಳಿಂದ ಈ ಕಟ್ಟಡದ ರಚನೆಯ ಬಗ್ಗೆ ದಾಖಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಉಡುಪಿ ಮತ್ತು ಮಂಗಳೂರಿನ 12 ಕಲಾವಿದರು ಸೇರಿಕೊಂಡು ಈ ಕಟ್ಟಡದ ಕಲಾಕೃತಿಗಳನ್ನು ತಮ್ಮ ಕುಂಚದಲ್ಲಿ ರಚಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

IMG 20230703 WA0004 Featured Story, Udupi


ಈ ಕಟ್ಟಡವನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ ಆಗಿದೆ. ಇಲ್ಲದಿದ್ದರೆ ಇದನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನಾದರೂ ಮುಂದೂಡಲಿ ಎಂಬುದು ನಮ್ಮ ಮನವಿ. ಯಾಕೆಂದರೆ ಇದರ ದಾಖಲೀಕರಣ ಮಾಡಲು ಇನ್ನಷ್ಟು ಸಮಯ ಅವಕಾಶ ಬೇಕು ಎನ್ನುತ್ತಾರೆ ಆರ್ಕಿಟೆಕ್ಟ್ ಶರ್ವಾನಿ ಭಟ್.


ಉಡುಪಿಯ ಹೃದಯ ಭಾಗದಲ್ಲಿರುವ ಈ ಹಳೆಯ ಕಟ್ಟಡ ಉಡುಪಿಯ ಆಸ್ತಿಯಾಗಿದೆ. ಇದನ್ನು ನೆಲಸಮಗೊಳಿಸಲು ಅವಕಾಶ ನೀಡದೆ ಪರ್ಯಾಯವಾಗಿ ಮ್ಯೂಸಿಯಂ ಅಥವಾ ಪಾರಂಪರಿಕ ವಸ್ತುಸಂಗ್ರಹಾಲಯ ಅಥವಾ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಬೇಕು ಎಂದು ಕಲಾವಿದ ಜನಾರ್ದನ ಹಾವಂಜೆ ಒತ್ತಾಯಿಸಿದ್ದಾರೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button