ಎನ್.ಐ.ಎಯಿಂದ ಎಎಂಯು ವಿದ್ಯಾರ್ಥಿ ಬಂಧನ

ಅಲಿಗಢ/ಸಹಾರನ್‌ಪುರ: ಐಎಸ್‌ಐಎಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿ ಫೈಜಾನ್ ಅನ್ಸಾರಿ (19) ಅವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೊಂದೆಡೆ, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಸಹರಾನ್‌ಪುರದಿಂದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದೆ.

ಇವರಿಬ್ಬರು ನಕಲಿ ದಾಖಲೆಗಳನ್ನು ಬಳಸಿ ಭಾರತೀಯ ಪ್ರಜೆಗಳನ್ನು ಯಾಮಾರಿಸುತ್ತಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಅವರನ್ನು ಹಬೀಬುಲ್ಲಾ ಮಿಸ್ಬಾ (26) ಮತ್ತು ಅಹ್ಮದುಲ್ಲಾ (35) ಎಂದು ಗುರುತಿಸಲಾಗಿದೆ.

Latest Indian news

Popular Stories