ನಿತೀಶ್ ಕುಮಾರ್ ಪ್ರಧಾನಿ ಮೋದಿ ಪಾದ ಮುಟ್ಟಿ ಬಿಹಾರವನ್ನು ಅವಮಾನಿಸಿದರು: ಪ್ರಶಾಂತ್ ಕಿಶೋರ್

ಭಾಗಲ್ಪುರ್, ಬಿಹಾರ:ರಾಜಕೀಯ ತಂತ್ರಜ್ಞ ಮತ್ತು ಸಮಾಜಿಕ ಕಾರ್ಯಕರ್ತ-ರಾಜಕಾರಣಿ ಪ್ರಶಾಂತ್ ಕಿಶೋರ್ ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಧಿಕಾರದಲ್ಲಿ ತಮ್ಮದೇ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ “ಪಾದಗಳನ್ನು ಮುಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.

‘ಜನ್ ಸೂರಾಜ್’ ಅಭಿಯಾನವನ್ನು ನಡೆಸುತ್ತಿರುವ ಪ್ರಶಾಂತ್ ಕಿಶೋರ್, ಭಾಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಈ ಹಿಂದೆ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ನಾನು ಈಗ ನಿತೀಶ್ ಕುಮಾರ್ ಅವರನ್ನು ಏಕೆ ಟೀಕಿಸುತ್ತಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಆಗ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಜೆಡಿಯು ಅನ್ನು ನಿರ್ವಹಿಸಿದ್ದ ಕಿಶೋರ್ ಹೇಳಿದ್ದಾರೆ.

“ರಾಜ್ಯದ ನಾಯಕ ಎಂದರೆ ಜನರ ಹೆಮ್ಮೆ. ಆದರೆ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ಬಿಹಾರಕ್ಕೆ ಅವಮಾನ ಮಾಡಿದ್ದಾರೆ” ಎಂದು ಅವರು ಕಳೆದ ವಾರ  ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉಲ್ಲೇಖಿಸಿ ಆರೋಪಿಸಿದರು.

ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು 12 ಸ್ಥಾನಗಳನ್ನು ಗೆದ್ದುಕೊಂಡು ಎನ್‌ಡಿ.ಎ ಮೈತ್ರಿಕೂಟದಲ್ಲಿ ಸರಕಾರ ನಡೆಸುತ್ತಿದೆ.

Latest Indian news

Popular Stories