ಬಿಜೆಪಿಗೆ ತೀವ್ರ ಮುಜುಗರವಾದ ನಂತರ ತನ್ನ ಹೇಳಿಕೆ ಹಿಂಪಡೆದ RSS ನಾಯಕ ಇಂದ್ರೇಶ್ ಕುಮಾರ್!

ನವ ದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಭಗವಾನ್ ರಾಮನನ್ನು ವಿರೋಧಿಸಿದವರು ಸೋತರು. ಭಗವಾನ್ ರಾಮನ ವೈಭವವನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದ್ದವರು ಅಧಿಕಾರದಲ್ಲಿದ್ದಾರೆ ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.

RSS ಸೈದ್ಧಾಂತಿಕ ಮಾರ್ಗದರ್ಶಿಯೆಂದು ಖ್ಯಾತರಾಗಿರುವ ಇಂದ್ರೇಶ್ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) 240 ಸ್ಥಾನಗಳಿಗೆ ಸೀಮಿತವಾಗಿದೆ ಎಂದು ಹೇಳುವ ಮೂಲಕ ಕುಮಾರ್ ನಿನ್ನೆ ಕಿಡಿ ಕಾರಿದ್ದರು. ಜೈಪುರ ಬಳಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕುಮಾರ್, “ಭಗವಾನ್ ರಾಮನ ಭಕ್ತಿ ಮಾಡಿದ ಪಕ್ಷ ಮತ್ತು ಸೊಕ್ಕಿನ ಪಕ್ಷವನ್ನು 240 ಕ್ಕೆ ಸಿಮೀತಗೊಂಡಿದ್ದಾರೆ ಆದರೆ ಅದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ” ಎಂದು ಹೇಳಿದ್ದರು.

ಕುಮಾರ್ ಅವರ ಈ ಮಾತುಗಳು ಚರ್ಚೆಗೆ ಕಾರಣವಾಗಿತ್ತು. ಆರ್‌ಎಸ್‌ಎಸ್ ನಾಯಕ ತಮ್ಮ ಹೇಳಿಕೆ ಸ್ಪಷ್ಟಪಡಿಸುವ ಮೂಲಕ ಬಿಜೆಪಿಯ ಮುಜುಗರ ತಪ್ಪಿಸಲು ಯತ್ನಿಸಿದ್ದಾರೆ.

“ಪ್ರಸ್ತುತ ದೇಶದ ಮನಸ್ಥಿತಿ ತುಂಬಾ ಸ್ಪಷ್ಟವಾಗಿದೆ. ಭಗವಾನ್ ರಾಮನನ್ನು ವಿರೋಧಿಸುವವರು ಅಧಿಕಾರದಲ್ಲಿಲ್ಲ, ಭಗವಾನ್ ರಾಮನನ್ನು ಗೌರವಿಸುವ ಗುರಿಯನ್ನು ಹೊಂದುವವರು ಅಧಿಕಾರದಲ್ಲಿದ್ದಾರೆ, ಸರ್ಕಾರವು ಅಸ್ತಿತ್ವದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ ಎಂದು ಹೇಳಿ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

Latest Indian news

Popular Stories