ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಯೂಟರ್ನ್? – ತೇಜಸ್ವಿ ಯಾದವ ಹೇಳಿದ್ದೇನು?

ಪಾಟ್ನಾ: ಲೋಕಸಭೆ ಚುನಾವಣೆ
ಪಾಟ್ನಾ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ತಮ್ಮ ಮಾಜಿ ಮಿತ್ರ ನಿತೀಶ್ ಕುಮಾರ್ (Nitish Kumar) ಅವರು “ದೊಡ್ಡ ನಿರ್ಧಾರ” ತೆಗೆದುಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ (Tejaswi Yadav) ಇಂದು ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ಜೂನ್ 4ರ ನಂತರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತೇಜಸ್ವಿ ಯಾದವ್ ಭವಿಷ್ಯ ನುಡಿದಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ನಮ್ಮ ದೇಶವು ಹೊಸ ಆಡಳಿತವನ್ನು ನೋಡಲಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋತಿದ್ದಾರೆ. ಜೂನ್ 4ರ ನಂತರ ಅವರು ಪ್ರಧಾನಿಯಾಗುವುದಿಲ್ಲ. ದೇಶವು ಹೊಸ ಸರ್ಕಾರವನ್ನು ಹೊಂದಲಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರ ಹಠಾತ್ ಯು-ಟರ್ನ್ ಮತ್ತು ಜನವರಿಯಲ್ಲಿ ಎನ್‌ಡಿಎಗೆ ಹಿಂತಿರುಗಿದ ನಂತರ ಉಪ ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಂಡಿದ್ದ ತೇಜಸ್ವಿ ಯಾದವ್, ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಂದ ನಂತರ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ನಿತೀಶ್ ಕುಮಾರ್ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಿಂದ ಹೊರಗುಳಿದ ನಂತರ ದೊಡ್ಡ ಹೆಜ್ಜೆ ಇಡಬಹುದು ಎಂದು ಯಾದವ್ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ನಿಮಗೆ ದ್ರೋಹ ಮಾಡಿದ ಜೆಡಿಯು ಮುಖ್ಯಸ್ಥರೊಂದಿಗೆ ನೀವು ಮರು ಹೊಂದಾಣಿಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ ಯಾದವ್, ಅವರ ಪಕ್ಷ ಮತ್ತು ಅವರ ಒಬಿಸಿ ಪರ ರಾಜಕೀಯವನ್ನು ಉಳಿಸುವ ಹಿತಾಸಕ್ತಿಯಿಂದ ಅವರ ದೊಡ್ಡ ನಿರ್ಧಾರವನ್ನು ನಾನು ನಿರೀಕ್ಷಿಸುತ್ತೇನೆ ಎಂದಿದ್ದಾರೆ.

Latest Indian news

Popular Stories