Featured StoryNational

“ನಾವು 500 ವರ್ಷಗಳಿಂದ ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ” | “ಇನ್ನೂ ಮೂರು-ನಾಲ್ಕು ಮಸೀದಿಗಳ ಬಗ್ಗೆ ಪಿತೂರಿ ನಡೆಯುತ್ತಿದೆ” – ಒವೈಸಿ ಹೇಳಿದ್ದೇನು?

ನವದೆಹಲಿ:ಸಂಸದ ಅಸಾದುದ್ದೀನ್ ಓವೈಸಿ ಬಾಬರಿ ಮಸೀದಿ ವಿವಾದ ಬಗ್ಗೆ ಮಾತನಾಡಿದ್ದು, ಕಳೆದ 500 ವರ್ಷಗಳಿಂದ ಯಾವ ಸ್ಥಳದಲ್ಲಿ ಕುರಾನ್ ಪಠಿಸಲ್ಪಡುತ್ತಿತ್ತೋ ಅದು ಈಗ ನಮ್ಮ ಕೈಯಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಚಟುವಟಿಕೆಗಳ ಬಗ್ಗೆ ಗಮನ ಇರಿಸಬೇಕೆಂದು ಎಐಎಂಐಎಂ ನ ನಾಯಕ ಅಸಾದುದ್ದೀನ್ ಓವೈಸಿ ಮುಸ್ಲಿಂ ಯುವಕರಿಗೆ ಕರೆ ನೀಡಿದ್ದು, ದೇಶಾದ್ಯಂತ ಇರುವ ಮಸೀದಿಗಳು ಯಥಾಸ್ಥಿತಿಯಲ್ಲಿರುವಂತಾಗಬೇಕು ಎಂದು ಹೇಳಿದ್ದಾರೆ.

“ನಾವು 500 ವರ್ಷಗಳಿಂದ ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ, ಯುವಕರೇ, ಸುನ್ಹೇರಿ ಮಸೀದಿ (ಸುವರ್ಣ ಮಸೀದಿ) ಇನ್ನೂ ಮೂರು-ನಾಲ್ಕು ಮಸೀದಿಗಳ ಬಗ್ಗೆ ಪಿತೂರಿ ನಡೆಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ದೆಹಲಿಯೂ ಸೇರಿದೆಯೇ? ವರ್ಷಗಳ ಕಠಿಣ ಪರಿಶ್ರಮದ ನಂತರ ನಾವು ಇಂದು ನಮ್ಮ ಸ್ಥಾನವನ್ನು ಸಾಧಿಸಿದ್ದೇವೆ. ನೀವು ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಓವೈಸಿ ಹೇಳಿದ್ದಾರೆ.

“ಯುವಜನರೇ, ನಾನು ನಿಮಗೆ ಹೇಳುತ್ತಿದ್ದೇನೆ, ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ ಮತ್ತು ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ?” ಎಂದು ಸೋಮವಾರ ಭವಾನಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಓವೈಸಿ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button