ವಿಶ್ವಕಪ್ ಅಭ್ಯಾಸ ಪಂದ್ಯ: ಪಾಕ್ ವಿರುದ್ಧ ನ್ಯೂಜಿಲ್ಯಾಂಡ್ ಗೆ 5 ವಿಕೆಟ್ ಗಳ ಜಯ

ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ನ್ಯೂಜಿಲ್ಯಾಂಡ್ 5 ವಿಕೆಟ್ ಗಳಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 345 ರನ್ ಗಳಿಸಿ ಎದುರಾಳಿ ತಂಡಕ್ಕೆ 346 ರನ್ ಗಳ ಗುರಿ ನೀಡಿತು.

ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್,  5 ವಿಕೆಟ್ ಗಳ ನಷ್ಟಕ್ಕೆ 43.4 ಓವರ್ ಗಳಲ್ಲೇ 346 ರನ್ ಗಳಿಸಿ ಗೆಲುವು ಸಾಧಿಸಿತು.

ಬಾಬರ್‌ ಆಜಂ 84 ಎಸೆತಗಳಲ್ಲಿ 80 ರನ್‌, ಮೊಹಮ್ಮದ್‌ ರಿಜ್ವಾನ್‌ 94 ಎಸೆತಗಳಲ್ಲಿ 103 ರನ್‌, ಸೌದ್‌ ಶಾಕೀಲ್‌ 75 ರನ್‌ ಹಾಗೂ ಅಘಾ ಸಲ್ಮಾನ್‌ 33 ರನ್‌ಗಳ ನೆರವಿನಿಂದ 300 ರನ್‌ಗಳ ಗಡಿ ದಾಟುವಲ್ಲಿ ಪಾಕ್ ಯಶಸ್ವಿಯಾಯಿತು.

 

Latest Indian news

Popular Stories