ಏಷ್ಯಾಕಪ್ 2023: ಪಾಕಿಸ್ತಾನ ವಿರುದ್ದ ಶ್ರೀಲಂಕಾಗೆ ವಿರೋಚಿತ ಜಯ, ಫೈನಲ್ ಗೆ ಲಗ್ಗೆ

ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಶ್ರೀಲಂಕಾ ತಂಡ ವಿರೋಚಿತ ಗೆಲುವು ಸಾಧಿಸಿದ್ದು, ಟೂರ್ನಿಯ ಫೈನಲ್ ತಲುಪಿದೆ.

ಪಾಕಿಸ್ತಾನ ನೀಡಿದ 252ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ (91 ರನ್), ಸಮರ ವಿಕ್ರಮ (48ರನ್) ಮತ್ತು ಚರಿತ್ ಅಸಲಂಕಾ (49ರನ್) ರ ಅಮೋಘ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 252ರನ್ ಗಳಿಸಿ 2 ವಿಕೆಟ್ ಅಂತರದ ವಿರೋಚಿತ ಗೆಲುವು ಸಾಧಿಸಿತು. 

ಪಾಕಿಸ್ತಾನ ಇನ್ನೇನು ಗೆದ್ದೇ ಬಿಟ್ಟಿತು ಎನ್ನುಲಾಗಲೇ ಪಂದ್ಯದ ಕೊನೆಯ ಹಂತದಲ್ಲಿ ಬೌಂಡರಿ ಗಿಟ್ಟಿಸಿದ ಅಸಲಂಕಾ ಕೊನೆಯ ಎಸೆತದಲ್ಲಿ 2 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಶ್ರೀಲಂಕಾ ತಂಡ 12ನೇ ಬಾರಿಗೆ ಏಷ್ಯಾಕಪ್ ಫೈನಲ್ ಗೇರುವಂತೆ ಮಾಡಿದರು.

ಈ ಗೆಲುವಿನ ಮೂಲಕ ಶ್ರೀಲಂಕಾ ಟೂರ್ನಿಯ ಫೈನಲ್ ಗೇರಿದ್ದು, ಫೈನಲ್ ನಲ್ಲಿ ಪ್ರಶಸ್ತಿಗಾಗಿ ಭಾರತದೊಂದಿಗೆ ಸೆಣಸಲಿದೆ.

ಪಾಕಿಸ್ತಾನ ಪರ ಇಫ್ತಿಕಾರ್ ಅಹ್ಮದ್ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 2 ಮತ್ತು ಶದಾಬ್ ಖಾನ್ 1 ವಿಕೆಟ್ ಪಡೆದರು.

Latest Indian news

Popular Stories