ಮಲ್ಪೆ:ಒರಿಸ್ಸಾ ಮೂಲದ ಕಾರ್ಮಿಕರಿಬ್ಬರ ದಾರುಣ ಸಾವು ಪರಿಹಾರಕ್ಕೆ ಸಿಐಟಿಯು ಆಗ್ರಹ


ಉಡುಪಿ:ಸೆ.14: ಮಲ್ಪೆ ಬಳಿಯ ತೊಟ್ಟಂನಲ್ಲಿ ಮನೆ ನಿರ್ಮಾಣಕ್ಕೆ ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುತ್ತಿದ್ದಾಗ ಒರಿಸ್ಸಾ ಮೂಲದ ಯುವ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿರುವುದು ವರದಿಯಾಗಿದೆ.


ಇಂತಹ ಪ್ರಕರಣಗಳು ಅಲ್ಲಲ್ಲಿ ಮಾಮೂಲಿಯೆಂಬಂತೆ ನಡೆಯುತ್ತಿರುವುದು ಖಂಡನೀಯವಾಗಿದೆ.ಕಾರ್ಮಿಕರು ಕೆಲಸ ಮಾಡುವಾಗ ಸಂಬಂಧಪಟ್ಟವರು ಯಾವುದೇ ಸುರಕ್ಷತೆ ಒದಗಿಸದೇ ಇರುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು ಇಂತಹ ಪ್ರಕರಣಗಳು ಹೆಚ್ಚುತ್ತಿವೆ.


ಸುರಕ್ಷತೆ ಒದಗಿಸದೇ ಕೆಲಸ ಮಾಡಿಸಿಕೊಂಡು ಜೀವ ಹಾನಿಗೆ ಕಾರಣರಾದ ಗ್ರಾನೈಟ್ ಸಂಸ್ಥೆಯ ಮಾಲೀಕನ ಮೇಲೆ ಕಠಿಣ ಕ್ರಮ ಕೈಗೊಂಡು ಯುವ ಕಾರ್ಮಿಕರ ಕುಟುಂಬಗಳಿಗೆ ತಲಾ ರೂ 10 ಲಕ್ಷ ಪರಿಹಾರ ನೀಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಆಗ್ರಹಿಸಿದೆ.

Latest Indian news

Popular Stories