
Featured Story
ಗಾಝಾದಲ್ಲಿ ಮಕ್ಕಳನ್ನು ಮಲಗಿಸಲು ಇಸ್ರೇಲ್ ರಾಕೆಟ್ ಕಳಿಸುತ್ತಿದೆ..| ವಸಹಾತುಶಾಹಿಗಳಿಗೆ “ಅಮಾಯಕ” ಪಟ್ಟ! – ಕವನ
ನೋಡು ನೋಡುತ್ತಿದ್ದಂತೆ ಹೆಣವಾಗಿ ಬಿಟ್ಟರು..
ಆಟವಾಡುತ್ತಿದ್ದ ಮಗು ಶಾಶ್ವತವಾಗಿ ನಿದ್ರೆಗೆ ಜಾರಿದೆ…
ತಾತನ ಮಡಿಲಲ್ಲಿ ನಿಶ್ಶಾಂತವಾಗಿ ಮಲಗಿರುವ ಬಾಲಕಿ…
ಅಮ್ಮನ ಶವದ ಮುಂದೆ ಅಸಹಾಯವಾಗಿ ನಿಂತಿರುವ ಮಗು..
ಮನ ಕುಲಕುವ ದೃಶ್ಯಗಳು ಜಗತ್ತಿನ ಪಾಲಿಗೆ ಒಂದು ಕ್ಷಣ “ಛೆ” ಎನ್ನಲ್ಲಷ್ಟೇ ಮೀಸಲು!
ಗಾಝಾದಲ್ಲಿ ಮಕ್ಕಳನ್ನು ಮಲಗಿಸಲು ಇಸ್ರೇಲ್ ರಾಕೆಟ್ ಕಳಿಸುತ್ತಿದೆ..
ಪ್ರತಿ ರಾಕೆಟ್ ಮಕ್ಕಳನ್ನು ಶಾಂತವಾಗಿಸುತ್ತಿದೆ!
ಹೌದು! ಪ್ರತಿ ದಾಳಿ ನಡೆಸಿ ಮಕ್ಕಳನ್ನು ಕೊಂದು
ಇಸ್ರೇಲ್’ಗೂ ಆತ್ಮರಕ್ಷಣೆ ಮಾಡಬೇಕಾಲ್ವ?
ಖಂಡನೆ, ಪರಿಹಾರದ ಟ್ರಕ್ಕುಗಳು…,
ಹಿಂಬಾಗಿಲಿನಲ್ಲಿ ಶಸ್ತ್ರಾಸ್ತ್ರದ ಲಾರಿಗಳು ಇಸ್ರೇಲ್ ಮಡಿಲು ಸೇರುತ್ತಿರುವುದು ತಿಳಿಯದೇನು?
ಮಾನವ ಹಕ್ಕುಗಳ ಹರಣ, ಭಯೋತ್ಪಾದನೆ,
ಇದೆಲ್ಲವೂ ನಿರ್ದಿಷ್ಟ ಧರ್ಮಕ್ಕೆ ಸೇರಿದ್ದರೆ ಮಾತ್ರ…!
ಇಲ್ಲದಿದ್ದರೆ ಮಕ್ಕಳ ಹತ್ಯಾಕೋರರಿಗೂ “ಅನುಕಂಪ”ದ ಕಣ್ಣೀರು;
ವಸಹಾತುಶಾಹಿಗಳಿಗೆ “ಅಮಾಯಕ” ಪಟ್ಟ!!
– ಯಾಸೀನ್ ಕೋಡಿಬೆಂಗ್ರೆ




