ಶಾಸಕ ಯತ್ನಾಳ ಆರೋಪ ಸಾಬೀತು ಪಡಿಸಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ

ವರದಿ: ಸಮಿಯುಲ್ಲಾ ಉಸ್ತಾದ

ವಿಜಯಪುರ : ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರಿಗೆ ಐಎಸ್ಐಎಸ್ ಉಗ್ರ ಸಂಘಟನೆಯೊಂದಿಗೆ ಲಿಂಕ್ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ಯತ್ನಳ ಅದನ್ನು ಸಾಬೀತು ಮಾಡ ಬೇಕು ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಆಗ್ರಹಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲ ಸಮುದಾಯಗಳ ಮುಖ್ಯಮಂತ್ರಿ, ಹುಬ್ಬಳ್ಳಿಯಲ್ಲಿ ನಡೆದಿರುವ ಮೌಲ್ವಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಮೌಲ್ವಿ ತನ್ವೀರ್ ಪೀರಾ ಹಾಸ್ಮಿ ಅವರ ಜೊತೆ ವೇಧಿಕೆ ಹಂಚಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಒಬ್ಬ ಧರ್ಮ ಗುರು, ಮೌಲ್ವಿಗಳನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಕೆ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಯತ್ನಾಳ ಅವರಿಗೆ ಫಲ ಸಿಗುವುದಿಲ್ಲ. ಒಂದು ವೇಳೆ ತಮ್ಮ ಬಳಿ ಯಾವುದಾದರೂ ದಾಖಲೆಗಳಿದ್ದರೆ, ಆರೋಪವನ್ನು ಸಾಭೀತು ಮಾಡಲಿ ನಾನು ದೇಶವನ್ನು ಬಿಡುತ್ತೇನೆ ಎಂದು ತನ್ವೀರ್ ಪೀರಾ ಹಾಸ್ಮಿ ಅವರು ವಿದೇಶದಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಾಭೀತು ಮಾಡಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ ಎಂದರು.
ತನ್ವೀರ ಫೀರಾ ಧರ್ಮ ಗುರು, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ವೇದಿಕೆ ಹಂಚಿಕೊಂಡಿದ್ದಾರೆ. ಆಗ ಏಕೆ ಉಗ್ರರ ನಂಟಿನ ಬಗ್ಗೆ ಮಾತಾಡಿಲ್ಲ. ಶಾಂತಿ ಸೌಹಾರ್ಧತೆಯಿಂದ ನೆಲೆಸಿರುವ ವಿಜಯಪುರದಲ್ಲಿ ಜಾತಿ-ಜಾತಿಗಳ ಮಧ್ಯ ಕೋಮು ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುವ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಖಂಡನೀಯ.

ಯತ್ನಾಳ ಮಾತನಾಡುವಾಗ ನಾಲಿಗೆ-ಮೆದುಳಿಗೆ ಸಂಬಂಧವೇ ಇರುವುದಿಲ್ಲ. ಸಂವಿಧಾನ ಬದ್ಧವಾಗಿ ಶಾಸಕರಾಗಿರುವ ಅವರು ಗಡ್ಡದವರು, ಬುರ್ಕಾದವರು ಹತ್ತಿರ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ದೋರಣೆಯಾಗಿದೆ. ಇವರ ಹೇಳಿಕೆಗಳಿಂದ ರಾಜಕೀಯ ಹಾಗೂ ಸಮಾಜಿಕ ಸ್ವಾಸ್ತ್ಯ ಹಾಳಾಗುತ್ತಿದೆ. ತನ್ವೀರ್ ಪೀರಾ ಅವರೊಂದಿಗೆ ಉದ್ಯೆಮೆಯಲ್ಲಿ ಪಾಲುದಾರಿಕೆ ಹೊಂದಿರುವ ಯತ್ನಾಳ ಅವರಿಗೆ ಇಷ್ಟು ವರ್ಷಗಳ ನಂತರ ಉಗ್ರ ನಂಟಿನ ಬಗ್ಗೆ ಗೊತ್ತಾಯಿತಾ? ಗೊತ್ತಿದ್ದರೆ, ಇಷ್ಟು ದಿನ ಏಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಸಿದರು.

ಅಂಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಶಾಸಕ ಯತ್ನಾಳ ಅವರು ಮುಸ್ಲಿಂರ ಬಗ್ಗೆ ಮಾತನಾಡಿ ದೇಶ ಭಕ್ತ ಎಂದು ಬಿಂಭಿಸಿಕೋಳ್ಳಲು ಹೊರಟಿದ್ದಾರೆ. ಇದೆಲ್ಲ ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಿರಿ, ಸ್ವಾರ್ಥ ರಾಜಕಾರಣಕ್ಕಾಗಿ ಮುಸ್ಲಿಂರ ಮೇಲೆ ಆರೋಪ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ ಮೊದಲು ಅವುಗಳತ್ತ ಗಮನ ಹರಿಸಿ ಎಂದು ಹರಿಹಾಯ್ದರು.

ಕಾಂಗ್ರೆಸ್ ಮುಖಂಡ ರಫೀಕ್ ಟಪಾಲ ಮಾತನಾಡಿ, ಐಎಸ್ಐಎಸ್ ಜಗತ್ತಿನ ಭೂಪಟದಿಂದ ಕಿತ್ತು ಹೋಗಿದೆ. ಸುಳ್ಳು ಆರೋಪ ಮಾಡಿ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿರುವ ಯತ್ನಾಳ ಅವರ ಮೇಲೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರು, ತನ್ವೀರ್ ಪೀರಾ ಹಾಸ್ಮಿ ಅವರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಫೋಟೋಗಳು ತನ್ವೀರ್ ಪೀರಾ ಫೇಸ್ಬುಕ್ನಲ್ಲಿರು ಫೋಟೋಗಳಾಗಿವೆ. ಅವು ಬಗದಾದ್ನಲ್ಲಿರು ಮೈಬುಸುಭಾನಿ ದರ್ಗಾ ಧರ್ಮಗುರುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತೆಗೆಯಲಾಗಿದೆ. 13 ವರ್ಷದ ಹಿಂದಿನ ಫೋಟೋಗಳ ಕುರಿತು ಯತ್ನಾಳ ಈಗ ಮಾತನಾಡುತ್ತಿರುವುದು ರಾಜಕೀಯ ಲಾಭಕ್ಕೆ ಯತ್ನಾಳ ಈ ಕೂಡಲೇ ಭೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜಿಕ ಹೋರಾಟಗಾರ ಫಯಾಜ್ ಕಲಾದಗಿ, ದಲಿತ ಮುಖಂಡ ನಾಗರಾಜ ಲಂಭು ಉಪಸ್ಥಿತರಿದ್ದರು.

Latest Indian news

Popular Stories