Featured StoryState News

ಸಿದ್ಧರಾಮಯ್ಯಗೆ ಪ್ರತಾಪ್ ಸಿಂಹ ಸವಾಲ್: ಲೋಕಾಯುಕ್ತ ಕತ್ತು ಹಿಸುಕಿ ಎಸಿಬಿ ಸ್ಥಾಪಿಸಿದ್ದೇಕೆ?

ವಿಜಯಪುರ : ಸಿದ್ದರಾಮಯ್ಯನವರೆ, “ನೀವು ತಿಂದಿದ್ದು, ಬದನೆಕಾಯಿ ನಮಗೆ ವೇದ ಹೇಳಬೇಡಿ” ನಿಮ್ಮವರನ್ನು ಉಳಿಸಿಕೊಳ್ಳಲು ಲೋಕಾಯುಕ್ತವನ್ನು ಕುತ್ತಿಗೆ ಹಿಸುಕಿ ಎಸಿಬಿಯನ್ನು ಸ್ಥಾಪಿಸಿಕೊಂಡಿದ್ದಿರಿ, ಆದರೆ ನಾವು ಇಂದು ಲೋಕಾಯುಕ್ತ ಸಂಸ್ಥೆಗೆ ಮರುಜೀವ ತುಂಬುವ ಮೂಲಕ ನಮ್ಮದೇ ಪಕ್ಷದ ಶಾಸಕರ ಪುತ್ರನ ಮನೆ ಮೇಲೆ ದಾಳಿ ನಡೆಸುವಷ್ಟು ಸ್ವಾತಂತ್ರö್ಯ ನೀಡಿದ್ದೇವೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಂದೆಡೆ ಕಬಿನಿ ಜಲಾಶಯ ಇದೆ ಮತ್ತೊಂದೆಡೆ ಕಾವೇರಿ ಇದೆ ಹೀಗಿದ್ದರು ನಾಲ್ಕು ಬಾರಿ ಪ್ರತಿನಿಧಿಸಿದ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸಲು ಸಿದ್ಧರಾಮಯ್ಯನವರಿಗೆ ಆಗಲಿಲ್ಲ ಅದಕ್ಕೆ ಇವರಿಗೆ ಕಳೆದ ಬಾರಿ ಬಾದಾಮಿ ಕ್ಷೇತ್ರಕ್ಕೆ ಬರಬೇಕಾಯಿತು ಎಂದರು.

ಇನ್ನು ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತನ್ನವರು ಕಂಡವರ ಮಕ್ಕಳು ಅಂತಾ ನೋಡುವುದಿಲ್ಲ ಎಲ್ಲರನ್ನು ಒಂದೇಯಾಗಿ ನೋಡುತ್ತೇ ಎನ್ನುವುದಕ್ಕೆ ಈ ಒಂದು ಘಟನೆ ತೋರಿಸುತ್ತದೆ.

ಇದೇ ದಿ.9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರಕ್ಕೆ ಬೇಟಿ ನೀಡಲಿದ್ದು, ಇಂಡಿ, ಚಡಚಣ ಹಾಗೂ ವಿಜಯಪುರ ಮೂರು ತಾಲೂಕುಗಳಿಗೂ ಅನುಕೂಲವಾಗುವ 3000 ಕೋಟಿ ವೆಚ್ಚದ `ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ’ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಚಿಮ್ಮಲಗಿ ಏತ ನೀರಾವರಿ ಯೋಜನೆಗೆ 750 ಕೋಟಿ ರೂ. ಅನುದಾನ ಸೇರಿದಂತೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಮ್ಮ ಬಿಜೆಪಿ ನೇತೃತ್ವದ ಸರ್ಕಾರವೇ ಅತೀ ಹೆಚ್ಚು ಅಂದರೆ, 5000 ಕೋಟಿ ರೂ. ಕ್ಕಿಂತಲೂ ಹೆಚ್ಚಿನ ಅನುದಾನ ನೀಡಿ ರೈತರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಉತ್ತರ ಕರ್ನಾಟಕದ ಭೂಮಿಗೆ ಬೆಲೆ ಬರುವಂತೆ ಮಾಡಿದ್ದೇವೆ ಎಂದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ತಳವಾರ-ಪರಿವಾರ ಸಮುದಾಯಗಳ ಕುಲಶಾಸ್ತಿçÃಯ ಅಧ್ಯಯನ ಮಾಡಲು ಸಮಿತಿ ನೇಮಕ ಮಾಡಿ ಆ ವರದಿಯನ್ನ ಕೇಂದ್ರಕ್ಕೆ ಸಲ್ಲಿಸಿ ಎರಡೂ ಸಮುದಾಯಗಳನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದೇವು. 2019 ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು, ಪ್ರಲ್ಹಾದ ಜೋಷಿ, ಸಚಿವ ಶ್ರೀರಾಮಲು ಸೇರಿದಂತೆ ಅನೇಕ ಬಿಜೆಪಿ ನಾಯಕರು ಒತ್ತಾಯ ಮಾಡಿ ತಳವಾರ-ಪರಿವಾರ ಸಮುದಾಯಕ್ಕೆ ಎಸ್ಟಿ ಸೇರ್ಪಡೆ ಮಾಡಿಸುವುದರ ಮೂಲಕ ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರು, ಬಡವರು, ಹಿಂದುಳಿದವರು ಉದ್ದಾರವಾಗಿಲ್ಲ. ಬದಲಾಗಿ ಕಾಂಗ್ರೆಸ್ ನಾಯಕರು, ಅವರ ಮಕ್ಕಳು, ಮೊಮ್ಮಕ್ಕಳು ಶ್ರೀಮಂತರಾಗಿದ್ದಾರೆ. ಇವರೆಲ್ಲ ಹೇಗೆ ಬೆಳೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರದಲ್ಲಿ ಲೂಟಿ ಹೊಡೆದು ಶ್ರೀಮಂತರಾಗಿದ್ದಾರೆ ಎಂದು ಹರಿಹಾಯ್ದರು.

ಕೇಂದ್ರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋನೆಯಡಿಯಲ್ಲಿ ರಾಜ್ಯದ 56 ಲಕ್ಷ ರೈತರಿಗೆ ವರ್ಷಕ್ಕೆ 10 ಸಾವಿರದಂತೆ ಸಹಾಯಧನ ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೈತರು, ಕೂಲಿ ಕಾರ್ಮಿಕರು, ಆಟೋ-ಕ್ಯಾಬ್ ಡ್ರೆöÊವರ್ಗಳ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ 11 ಲಕ್ಷ ಮಕ್ಕಳಿಗೆ ಸ್ಕಾಲರ್ಶೀಪ್ ನೀಡಲಾಗುತ್ತಿದೆ. ಈ ಎಲ್ಲ ಯೋಜನೆಗಳು 2023 ರ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿಯಲಿವೆ. ಈಗಾಗಲೇ ಬಿಜೆಪಿ ವಿಜಯ ಸಂಕಲ್ಪಯಾತ್ರೆ ಚಾಲನೆಯಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಂಸದ ಜಿಗಜಿಣಗಿ ಸೇರಿದಂತೆ ಎಲ್ಲ ಬಿಜೆಪಿ ಶಾಸಕರು ಜಿಲ್ಲೆ ಅಭಿವೃದ್ಧಿಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಮುಖಂಡ ದಯಾಸಾಗರ ಪಾಟೀಲ, ಬಿಜೆಪಿ ವಕ್ತಾರ ಡಾ.ಸುರೇಶ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟಿ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜ್ಯೋಷಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button