ಚಿಕ್ಕಮಗಳೂರು, ಆಗಸ್ಟ್ 10: ರಾಜ್ಯದ ಅತಿದೊಡ್ಡ ಭೂ ಹಗರಣದ ತನಿಖೆ (Tehsildar) ಇಂದು ಗುರುವಾರದಿಂದ ಆರಂಭವಾಗಿದೆ. ಸಾವಿರಾರು ಕೋಟಿ ಭೂ ಹಗರಣದ ತನಿಖೆಗೆ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಆದೇಶ ಹೊರಡಿಸಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಸರ್ಕಾರಿ ಭೂಮಿ (government land) ಕಬಳಿಕೆ ಚಿಕ್ಕಮಗಳೂರಿನಲ್ಲಿ (Chikkamagalur) ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ (Investigation) ಕೈಗೆತ್ತಿಕೊಳ್ಳಲಾಗಿದೆ.
ಸರ್ಕಾರಿ ಭೂಮಿ ಒತ್ತುವರಿ , ಅಕ್ರಮ ಭೂಮಂಜೂರಾತಿ ಕುರಿತು ತನಿಖೆ ನಡೆಯಲಿದೆ. ಇದರಿಂದ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು, ಭ್ರಷ್ಟ ಅಧಿಕಾರಿಗಳಿಗೆ ಚಿಂತೆ ಶುರುವಾಗಿದೆ.
ಇಂದಿನಿಂದ ಚಿಕ್ಕಮಗಳೂರಿನಲ್ಲಿ ಈ ಬೃಹತ್ ಭೂ ಹಗರಣದ ತನಿಖೆ 15 ತಹಶಿಲ್ದಾರ್ಗಳ ನೇತೃತ್ವದಲ್ಲಿ ನಡೆಯಲಿದೆ. ಮೊದಲ ಹಂತವಾಗಿ ಕಡೂರು, ಮೂಡಿಗೆರೆ ತಾಲೂಕಿನಾದ್ಯಂತ ಭೂ ಅಕ್ರಮದ ಬಗ್ಗೆ ತನಿಖೆ ನಡೆಯಲಿದೆ.
ಭೂ ಹಗರಣದ ತನಿಖೆಗೆ ಸರ್ಕಾರ 15 ತಹಶಿಲ್ದಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿದೆ. ಭೂ ಅಕ್ರಮದ ತನಿಖೆಗೆ ತಹಶಿಲ್ದಾರ್ ಗ್ರೇಡ್ 1, ಗ್ರೇಡ್ 2 ತಹಶಿಲ್ದಾರ್ ಗಳ ತಂಡ ರಚನೆಗೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆಯಾಗಿದೆ ಎಂಬುದು ಗಂಭೀರ ಆರೋಪ. ಜಿಲ್ಲೆಯಾದ್ಯಂತ ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ಭೂಮಿಯಲ್ಲಿ ಅಕ್ರಮಗಳು ನಡೆದಿವೆ. ಸರ್ಕಾರಿ ಶಾಲೆ, ಆಸ್ಪತ್ರೆ ಸೇರಿದಂತೆ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಕೊರತೆಯಾಗಿದೆ.