ಪುತ್ತೂರು: ಭೀಕರ ಅಪಘಾತ – ಇಬ್ಬರು ಮೃತ್ಯು

ಪುತ್ತೂರು, ಡಿ.7: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಗಡಿ ದೇವಸ್ಥಾನದ ಬಳಿ ಬುಧವಾರ ಡಿ.6ರಂದು ಮಿನಿ ಟ್ರಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಅಮೂಲ್ಯ ಪೆರಿಡಾ (23) ಮತ್ತು ಶಾಂತಿನಿರ್ಶ್ ಜೂಟಿ (27) ಎಂದು ಗುರುತಿಸಲಾಗಿದೆ.

ಮಿನಿ ಟ್ರಕ್ ಹಾಸನದಿಂದ ಮಂಗಳೂರಿಗೆ ಸರಕುಗಳನ್ನು ಸಾಗಿಸುತ್ತಿತ್ತು. ಗಡಿಭಾಗದಲ್ಲಿರುವ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿನಿ ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ವಾಹನದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳದಿಂದ ಪರಾರಿಯಾಗಿರುವ ಚಾಲಕ ಹಾಗೂ ವಾಹನಕ್ಕಾಗಿ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Latest Indian news

Popular Stories