ಬೆಂಗಳೂರು( ಹಿಂದುಸ್ತಾನ್ ಗಝೆಟ್ ಡೆಸ್ಕ್): ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿಯವರು ಲಂಡನಿನಲ್ಲಿರುವ ಬಸವಣ್ಣನವರ ಪ್ರತಿಮೆಗೆ ನಮಿಸುವ ಚಿತ್ರ ವೈರಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ ಖರ್ಗೆ,” 12ನೇ ಶತಮಾನದಲ್ಲೇ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ, ‘ಅನುಭವ ಮಂಟಪ’ ಸ್ಥಾಪಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಹುಟ್ಟು ನೀಡಿದ ಜಗಜ್ಯೋತಿ ಗುರು ಬಸವಣ್ಣನವರ ಪ್ರತಿಮೆಗೆ ಲಂಡನ್ ನಲ್ಲಿ ಭೇಟಿ ನೀಡಿ ಶ್ರೀ ರಾಹುಲ್ ಗಾಂಧಿಯವರು ನಮನ. ವಿಶ್ವಭೃಾತ್ವತದ ಸನ್ಮಾರ್ಗಕ್ಕೆ ಅಡಿಪಾಯ ಹಾಕಿದ ಗುರುವಿಗೆ ಕೈಜೋಡಿಸಿ ನಮಿಸಿದ ಜನನಾಯಕ” ಎಂದರು.
ಈ ಟ್ವೀಟ್ ಪರ ವಿರೋಧ ಕಮೆಂಟ್ ಬರುತ್ತಿದ್ದು ಈ ಪ್ರತಿಮೆಯನ್ನು ಉದ್ಘಾಟಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರೆಂದು ಹೇಳಿದರೆ ಇನ್ನು ಕೆಲವರು ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ. ಹಲವಾರು ಮಂದಿ ರಾಹುಲ್ ನಡೆಯನ್ನು ಸ್ವಾಗತಿಸಿದ್ದಾರೆ.