ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ | ” ಹಿಂದುಗಳು ಸತ್ಯದೊಂದಿಗೆ ನಿಲ್ಲುತ್ತಾರೆ – ಬಿಜೆಪಿಯ ಹಿಂದುತ್ವದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ” | “ನೀವು ಹಿಂದುಗಳಲ್ಲ” – 24 ಗಂಟೆ ದ್ವೇಷ, ಹಿಂಸೆ ಹರಡುತ್ತಾರೆ!

ನವದೆಹಲಿ: ಇಂದು ಸಂಸತ್ತಿನಲ್ಲಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಹಿಂದು ಧರ್ಮ ಸತ್ಯದೊಂದಿಗೆ ನಿಲ್ಲುತ್ತಾರೆ. ಆದರೆ ಬಿಜೆಪಿಯ ಹಿಂದುತ್ವ ಅಸತ್ಯದೊಂದಿಗೆ ನಿಲ್ಲುತ್ತಾರೆ” ಎಂದರು.

ಬಿಜೆಪಿಯವರು ತಮ್ಮನ್ನು ಹಿಂದುಗಳೆಂದು ಹೇಳಿ ಹಿಂಸೆ, ಸುಳ್ಳನ್ನು ನುಡಿಯುತ್ತಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಸಂಸದರು ತೀವ್ರ ಗದ್ದಲ ಎಬ್ಬಿಸಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರು ನೀವು ಇಡೀ ಹಿಂದು ಸಮುದಾಯವನ್ನು ದೂಷಿಸಿದ್ದೀರಿ ಎಂದಾಗ ರಾಹುಲ್ ಗಾಂಧಿ ಮಾತನಾಡಿ ಬಿಜೆಪಿ, ಆರ್.ಎಸ್.ಎಸ್ ಎಂದರೆ ಇಡೀ ಹಿಂದು ಸಮುದಾಯವಲ್ಲ ಎಂದು ತೀವ್ರ ತಿರುಗೇಟು ನೀಡಿದರು.

ನಂತರ ಗೃಹ ಸಚಿವ ಅಮಿತ್ ಶಾ ಮಧ್ಯ ಪ್ರವೇಶಿಸಿ ಇಡೀ ಹಿಂದು ಸಮುದಾಯವನ್ನು ಅವಮಾನಿಸಿದ್ದಾರೆಂದು ಹೇಳಿ ಮಾತನ್ನು ತಿರುಚುವ ಪ್ರಯತ್ನ ನಡೆಸಿದರು. ಆದರೆ ಇದನ್ನು ವಿರೋಧ ಪಕ್ಷದವರು ತೀವ್ರವಾಗಿ ವಿರೋಧಿಸಿದರು.

ಅಯೋಧ್ಯೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕುರಿತು ಮಾತನಾಡಿ ಸಮಾಜವಾದಿ ಪಕ್ಷದ ಸಂಸದರ ಕೈಕುಲುಕಿದರು.

Latest Indian news

Popular Stories