ತಲೆ ಮೇಲೆ ಲಗೇಜ್, ‘ಕೂಲಿ’ ಡ್ರೆಸ್ | ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ನವದೆಹಲಿ ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಆಗಮಿಸಿ ಹಮಾಲರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ರಾಹುಲ್ ಕೂಡ ಹಮಾಲರ ಕೆಂಪು ಅಂಗಿ ಧರಿಸಿ ತಲೆ ಮೇಲೆ ಸಾಮಾನುಗಳನ್ನು ಹೊತ್ತೊಯ್ದಿದ್ದಾರೆ. ಬಳಿಕ ಹಮಾಲಿಗಳ ಜತೆ ಕುಳಿತು ಅವರ ಸಮಸ್ಯೆಗಳನ್ನು ಕೇಳಿದರು.’

ಹಮಾಲರೊಂದಿಗೆ ರಾಹುಲ್ ಮಾತುಕತೆ ನಡೆಸುತ್ತಿರುವ ಚಿತ್ರವನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಎಕ್ಸ್’ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್​, ‘ಜನ ನಾಯಕ ರಾಹುಲ್ ಗಾಂಧಿ ಜಿ ಇಂದು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾದರು’ ಎಂದು ಬರೆದಿದೆ.

‘ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ರೈಲ್ವೆ ನಿಲ್ದಾಣದ ಪೋರ್ಟರ್ ಸ್ನೇಹಿತರು ಅವರನ್ನು ಭೇಟಿಯಾಗಲು ಬಯಸಿದ್ದರು. ಇಂದು ರಾಹುಲ್ ಜೀ ಅವರ ನಡುವೆ ತಲುಪಿ ಅವರ ಮಾತುಗಳನ್ನು ಆಲಿಸಿದರು. ಭಾರತ್ ಜೋಡೋ ಯಾತ್ರೆ ಈ ಮೂಲಕ ಮುಂದುವರೆದಿದೆ ಎಂದೂ ಪೋಸ್ಟ್​ ಮಾಡಲಾಗಿದೆ.

‘ಇನ್‌ಸ್ಟಾಗ್ರಾಮ್’ ಪೋಸ್ಟ್‌ನಲ್ಲಿ ರಾಹುಲ್, ‘ಇಂದು, ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಲ್ಲಿ ಕೆಲಸ ಮಾಡುವ ಸಹೋದರರನ್ನು ಭೇಟಿಯಾದೆ ಎಂದು ಬರೆದಿದ್ದಾರೆ. ಅಲ್ಲದೇ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿ ಈ ಆಸೆಯನ್ನು ಇತ್ತು. ಅವರು ನನ್ನನ್ನು ಬಹಳ ಪ್ರೀತಿಯಿಂದ ಕರೆದಿದ್ದರು. ಹೀಗಿರುವಾಗ ಭಾರತದ ದುಡಿಯುವ ಸಹೋದರರ ಆಶಯವನ್ನು ಹೇಗಾದರೂ ಸರಿ ಪೂರೈಸಬೇಕು’ ಎಂದಿದ್ದಾರೆ.

 

Latest Indian news

Popular Stories