ಉಡುಪಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉತ್ತಮ ಮಳೆ

ಉಡುಪಿ: ಕರಾವಳಿ ತೀರಾ ಪ್ರದೇಶದಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬೆಳಗಿನಿಂದ ಉತ್ತಮ ಮಳೆಯಾಗುತ್ತಿದೆ. ಈ ಬಾರಿ ಮಳೆ ತೀರಾ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದರೂ ಸೆಪ್ಟೆಂಬರ್ ನಲ್ಲಿ ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಸ್ವಲ್ಪಮಟ್ಟಿಗೆ ಮಳೆ ಕೊರತೆಯನ್ನು ನೀಗಿಸುತ್ತಿದೆ.

ಈಗಾಗಲೇ ಹವಾಮಾನ ಇಲಾಖೆ ಮುಂದಿನ ವಾರ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರ ವರೆಗೆ ಮುಂದಿನ ಒಂದು ವಾರಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿ ತೀರಾ ಇಲ್ಲವೆನ್ನುವಷ್ಟರ ಮಟ್ಟಿಗೆ ಮಳೆಯಾಗಿ ವಾತಾವರಣ ತಾಪಮಾನ ಕೂಡ ಹೆಚ್ಚಾಗಿತ್ತು. ಸೆಪ್ಟೆಂಬರ್ ಮಳೆಯಿಂದಾಗಿ ಕರಾವಳಿಯ ಜನ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಈಗಾಗಲೇ ಸರಕಾರ ಬರ ಘೋಷಣೆಯಡಿಯಲ್ಲಿ ಉಡುಪಿ ಜಿಲ್ಲೆಯ ಅತೀ ಹೆಚ್ಚು ಮಳೆಯಾಗುವ ತಾಲೂಕು ಕಾರ್ಕಳ ಕೂಡ ಸೇರಿರುವುದು ಮಳೆ ಎಷ್ಟರ ಮಟ್ಟಿಗೆ ಈ ಬಾರಿ ಕೈಕೊಟ್ಟಿದೆ ಎಂಬುವುದನ್ನು ಅಂದಾಜಿಸಬಹುದಾಗಿದೆ.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕವಾಗಿ ಮರಗಳ ಕಡಿಯುವಿಕೆ ಕೂಡ ಹವಾಮಾನ ವೈಪರೀತ್ಯಗಳಿಗೆ ಕಾರಣವೆಂದು ಅಂದಾಜಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಸಾವಿರಾರು ಮರಗಳು ನೆಲಕ್ಕುಳಿದನ್ನು ನೋಡಬಹುದಾಗಿದೆ. ಸರಕಾರ ಸುಸ್ಥಿರ ಅಭಿವೃದ್ಧಿಯ ಕಡೆ ಗಮನ ಹರಿಸದೆ ಬೇಕಾಬಿಟ್ಟಿ ಪರಿಸರದ ಮೇಲೆ ದೌರ್ಜನ್ಯ ಎಸಗಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮ ಎದುರಿಸಬೇಕಾಗಬಹುದು.

Latest Indian news

Popular Stories